ಮೈಸೂರು

ಮಾಧ್ಯಮ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ : ಅಧಿಕೃತ ಸಂಘ ‘ಡಿ.25’ ರಿಂದ ಅಸ್ತಿತ್ವಕ್ಕೆ

ಅಸಂಘಟಿತ ಮಾಧ್ಯಮ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಮೈಸೂರು ಜಿಲ್ಲಾ ಅಧಿಕೃತ ಪತ್ರಿಕಾ ಪ್ರತಿನಿಧಿಗಳ ಸಂಘ’ವನ್ನು ಸ್ಥಾಪಿಸಲಾಗಿದ್ದು ಡಿ.25ರ ಭಾನುವಾರ ಬೆಳಿಗ್ಗೆ 11 ರಿಂದ ಅಸ್ತಿತ್ವಕ್ಕೆ ಬರಲಿದೆ ಎಂದು ಗೌರವಾಧ್ಯಕ್ಷ ಬಿ.ಎನ್.ನಾಯಕ್ ತಿಳಿಸಿದರು.

ಅವರು, ಗುರುವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕುವೆಂಪುನಗರದ ಚಿಕ್ಕಮ್ಮಾ ನಿಕೇತನ ಕಮ್ಯೂನಿಟಿ ಹಾಲ್‍ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಸಂಸದ ಪ್ರತಾಪ್ ಸಿಂಹ ಆಗಮಿಸುವರು, ಸಂಘದ ಗೌರವಾಧ್ಯಕ್ಷ ಬಿ.ಎನ್.ನಾಯಕ್ ಅಧ್ಯಕ್ಷತೆ ವಹಿಸುವರು. ಅಧ್ಯಕ್ಷ ಜನಾರ್ದನ್ ಎನ್. ಶಾಶಕರಾದ ಪಿ.ವಾಸು, ಎಂ.ಕೆ.ಸೋಮಶೇಖರ್, ಜಿ.ಟಿ.ದೇವೇಗೌಡ, ಮಹಾಪೌರ ಎಂ.ಜೆ.ರವಿಕುಮಾರ್, ಸಂಪಾದಕ ರಾಜಶೇಖರ ಕೋಟಿ, ಪತ್ರಕರ್ತರ ಸಂಘದ ಅಧ್ಯಕ್ಷ ದೀಪಕ್ ಕೆ. ಎಸ್ಪಿ ರವಿ.ಡಿ.ಚನ್ನಣ್ಣನವರ ಹಾಗೂ ಇತರರು ಉಪಸ್ಥಿತರಿರುವರು ಎಂದು ತಿಳಿಸಿದರು.  ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ದಿನಚರಿ ಬಿಡುಗಡೆ ಹಾಗೂ ಪತ್ರಿಕಾ ರಂಗದ ಹಿರಿಯರಿಗೆ ಸನ್ಮಾನಿಸಲಾಗುವುದು ನಂತರ ಶುಭ ರಾಘವೇಂದ್ರರಿಂದ ಜಾನಪದ ಗೀತಗಾಯನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಎಲ್ಲರಿಗೂ ಸಮಬಾಳ್ವೆ ಎನ್ನುವ ಧ್ಯೇಯದೊಂದಿಗೆ ಅಸಂಘಟಿತ ವಲಯಗಳಾದ ಪತ್ರಿಕಾ ವಿತರಕರು, ಮುದ್ರಕರು, ಸಾರಿಗೆ  ಹಾಗೂ ಪೇಪರ್ ಪ್ಯಾಕ್ ಮಾಡುವರು, ಪಾರ್ಸಲ್ ಸಿಬ್ಬಂದಿಗಳು ಸಂಘದಲ್ಲಿ ನೋಂದಾಯಿಸಿಕೊಳ್ಳಬಹುದು. ಇವರಲ್ಲೆರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಸಂಘವೂ ಶ್ರಮಿಸಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಜನಾರ್ಧನ್.ಎನ್. ಪ್ರಧಾನ ಕಾರ್ಯದರ್ಶಿ ದಯಾನಂದ.ಕೆ. ಜಂಟಿ ಕಾರ್ಯದರ್ಶಿ ರವಿ.ಎ, ಖಜಾಂಚಿ ಸಂತೋಷ್.ಕೆ.ಎಂ. ಉಪಸ್ಥಿತರಿದ್ದರು.

Leave a Reply

comments

Related Articles

error: