ಪ್ರಮುಖ ಸುದ್ದಿ

ಕಾವೇರಿ ನದಿಯ ಪ್ರವಾಹದಲ್ಲಿ ಇಳಿಮುಖವಾದ ಹಿನ್ನೆಲೆ : ಅಕ್ರಮ ಮರಳು ದಂದೆ ಶುರು

ರಾಜ್ಯ(ಮಂಡ್ಯ)ಆ.27:- ಕೆ.ಆರ್.ಎಸ್. ಕೆಳಭಾಗದ ಕಾವೇರಿ ನದಿಯ ಪ್ರವಾಹದಲ್ಲಿ ಇಳಿಮುಖವಾದ ಹಿನ್ನೆಲೆಯಲ್ಲಿ ಕಾವೇರಿ ನದಿ ಪಾತ್ರದಲ್ಲಿ  ಅಕ್ರಮ ಮರಳು ದಂದೆ ಆರಂಭವಾಗಿದೆ.

ಶ್ರೀರಂಗಪಟ್ಟಣದ ಸುತ್ತಲಿನ ಕಾವೇರಿ ನದಿಯಲ್ಲಿ ಎಗ್ಗಿಲ್ಲದೆ ಅಕ್ರಮ ಮರಳುಗಾರಿಕೆ ದಂದೆ ನಡೆಯುತ್ತಿದೆ.ಎತ್ತಿನಗಾಡಿ ಮೂಲಕ ತುಂಬಿದ ಅಕ್ರಮ ಮರಳುಗಾರಿಕೆ ನಡೆಸಲಾಗುತ್ತಿದ್ದು, ಈ ದಂದೆಯಲ್ಲಿ ಅಪ್ರಾಪ್ತ ಹುಡುಗರನ್ನು ಬಳಸಿಕೊಳ್ಳಲಾಗುತ್ತಿದೆಯೇ ಎಂಬ ಪ್ರಶ್ನೆಗಳೆದ್ದಿದೆ. ಮರಳು ಮಾಫಿಯಾದವರ ಪುಡಿಗಾಸಿನ ಆಸೆಗೆ‌ ನದಿಯಲ್ಲಿ‌ ಮುಳುಗಿ ಅಪ್ರಾಪ್ತರು ಮರಳು ತೆಗೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಪಾಲಹಳ್ಳಿ, ಶ್ರೀರಂಗಪಟ್ಟಣ ಗಂಜಾಮ್, ಪಾಲಹಳ್ಳಿ ದೊಡ್ಡಪಾಳ್ಯ, ಮೇಳಾಪುರ ಸೇರಿದಂತೆ ಹಲವು ನದಿಪಾತ್ರದ ದಂಡೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಅಕ್ರಮ ಮರಳುಗಾರಿಕೆ ನಡೆದರೂ ಪೊಲೀಸ್ ಇಲಾಖೆ ಕಂಡು ಕಾಣದಂತೆ ಕಣ್ಮುಚ್ಚಿ ಕುಳಿತಿದೆ.ಪೊಲೀಸ್ ಇಲಾಖೆಗೂ ಕೂಡ ಅಕ್ರಮ ಮರಳುಗಾರಿಕೆ ತಂಡದಿಂದ  ಕಮೀಷನ್ ಹೋಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: