ಮೈಸೂರು

ಜೆರಾಕ್ಸ್ ನೋಟುಗಳನ್ನು ಮಾಡುತ್ತಿದ್ದ ಅಂಗಡಿ ಮೇಲೆ ದಾಳಿ : ಮಹಿಳೆಯ ಬಂಧನ

ಮೈಸೂರು,ಆ.27:- ಜೆರಾಕ್ಸ್ ನೋಟುಗಳನ್ನು ಮಾಡುತ್ತಿದ್ದ ತಿಲಕ್ ನಗರದ ಅಂಗಡಿಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ಮಹಿಳೆಯೋರ್ವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಜೆ.ಪಿ.ನಗರ ನಿವಾಸಿ ಗೌರಮ್ಮ(40)ಎಂದು ಗುರುತಿಸಲಾಗಿದೆ. ಗೌರಮ್ಮ ವಿದ್ಯಾರಣ್ಯಪುರಂ ವ್ಯಾಪ್ತಿಯಲ್ಲಿನ ಗ್ರಂಥಾಲಯದ ಬಳಿ ರಸ್ತೆ ಬದಿ ವ್ಯಾಪಾರಿಗಳಿಂದ ಬಟ್ಟೆ ಖರೀದಿಸಿ ಜೆರಾಕ್ಸ್ ನೋಟುಗಳನ್ನು ನೀಡಿದ್ದು, ಗೌರಮ್ಮ ಮತ್ತು ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಘಟನೆ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ತಪಾಸಣೆ ನಡೆಸಿದಾಗ  ಜೆರಾಕ್ಸ್  ಮಾಡಿದ 500, 200ರೂ.ನೋಟು ಪತ್ತೆಯಾಗಿವೆ. ಪೊಲೀಸರು ತಿಲಕ್ ನಗರದ ಜ್ವಾಲಾಮುಖಿ ಎಂಟರ್ ಪ್ರೈಸಸ್ ಎಂಬ ಅಂಗಡಿ ಮೇಲೆ ದಾಳಿ ನಡೆಸಿ ಕಂಪ್ಯೂಟರ್, ಪ್ರಿಂಟರ್, ಜೆರಾಕ್ಸ್ ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಮುಖ ಆರೋಪಿ ಖಲೀಲ್ ನಾಪತ್ತೆಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇವರಿಬ್ಬರು ಈ ಹಿಂದೆ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಜೆರಾಕ್ಸ್ ನೋಟುಗಳ ಕುರಿತು ಖಲೀಲ್ ಗೌರಮ್ಮನಿಗೆ ತಿಳಿಸಿದ್ದ. ಬಳಿಕ ಕೆಲಸ ಬಿಟ್ಟು ಇವರಿಬ್ಬರೂ ಈ ವೃತ್ತಿಗಿಳಿದಿದ್ದರು ಎನ್ನಲಾಗಿದೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: