ಮೈಸೂರು

ಕಾರಿನ ಹಿಂಬದಿಯ ಗ್ಲಾಸ್ ಒಡೆದು ಕಳ್ಳತನ

ಮೈಸೂರು,ಆ.27:- ಕಾರಿನ ಹಿಂಬದಿಯ ಗ್ಲಾಸ್ ಒಡೆದು ಕಾರಿನಲ್ಲಿದ್ದ ಅಮೂಲ್ಯ ವಸ್ತುಗಳನ್ನು ಕಳ್ಳರು ಕದ್ದೊಯ್ದ ಘಟನೆ ಮೈಸೂರು ಅರಸು ರೋಡ್ ನಲ್ಲಿ ನಡೆದಿದೆ.

ಈ ಕುರಿತು ದೇವರಾಜ ಪೊಲೀಸ್ ಠಾಣೆಗೆ ರಶ್ಪದ್ ಎಂಬವರು ದೂರು ನೀಡಿದ್ದಾರೆ. ಆ. 25ರಂದು ರಶ್ಪದ್ ಮತ್ತು ಮನೆಯವರು ಪ್ರವಾಸಕ್ಕೆಂದು ಮೈಸೂರಿಗೆ ಬಂದಿದ್ದು ಸಂಜೆ 7.30 ರ ಸಮಯದಲ್ಲಿ ಮೈಸೂರಿನ ಅರಸು ರಸ್ತೆಯ ಸುಮಂಗಲಿ ಸಿಲ್ಕ್ ಅಂಗಡಿಯ ಮುಂಭಾಗದ ಕಾರ್ ಪಾರ್ಕಿಂಗ್ ನಲ್ಲಿ ತಮ್ಮ ಕಾರ್ ನ್ನು ನಿಲ್ಲಿಸಿ 8.30 ರ ವೇಲೆ ವಾಪಸ್ಸಾದಾಗ ಕಾರ್ ನ್ನು ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೋಡಿದಾಗ ಕಾರಿನ ಬಲಭಾಗದ ಹಿಂಬದಿಯ ಗ್ಲಾಸ್ ಒಡೆದಿರುವುದು ಕಂಡು ಬಂದಿದೆ. ಕಾರಿನ ಒಳಭಾಗ ಪರಿಶೀಲಿಸಲಾಗಿ ಕಾರಿನ ಹಿಂಭಾಗದ ಸೀಟ್ ನಲ್ಲಿಟ್ಟಿದ್ದ ವ್ಯಾನಿಟಿ  ಬ್ಯಾಗ್ ಕಳ್ಳತನವಾಗಿತ್ತು.  ಬ್ಯಾಗ್  ಒಳಗೆ ಅದರಲ್ಲಿ ತನ್ನ ಹೆಂಡತಿಯ ಒಂದು ಐ ಪೋನ್ ಮೊಬೈಲ್, ಎಟಿಎಂ ಕಾರ್ಡ್ ಗಳು, ಪಾನ್ ಕಾರ್ಡ್,ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ಕಾರ್ಡ್, ಮತ್ತು 1500ರೂ. ನಗದು ಹಣವಿತ್ತು. ಯಾರೋ ಕಳ್ಳರು ಕಾರಿನ ಗ್ಲಾಸ್ ಒಡೆದು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: