ಮೈಸೂರು

ಮನೆಯಲ್ಲಿ ಯಾರೂ ಇಲ್ಲದ ವೇಳೆ ಲಕ್ಷಾಂತರ ರೂ.ಚಿನ್ನಾಭರಣ ದೋಚಿದ ಕಳ್ಳರು

ಮೈಸೂರು,ಆ.27:- ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ಮುಂಬಾಗಿಲನ್ನು ಆಯುಧದಿಂದ ಮೀಟಿ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಮತ್ತು ಹಣವನ್ನು ಕದ್ದೊಯ್ದ ಘಟನೆ ಗಾಯತ್ರಿಪುರಂನಲ್ಲಿ ನಡೆದಿದೆ.

ಈ ಕುರಿತು ನಜರ್ ಬಾದ್ ಪೊಲೀಸ್ ಠಾಣೆಗೆ ಮನೆಯ ಮಾಲೀಕ ಶ್ರೀನಿವಾಸ್ ಎಂಬವರು ದೂರು ನೀಡಿದ್ದಾರೆ. #179, 01 ನೇ ಹಂತ, 03 ನೇ ಕ್ರಾಸ್, ಗಾಯತ್ರಿಪುರಂನ ಶ್ರೀನಿವಾಸ  ಆ.25 ರಂದು ಬೆಳಿಗ್ಗೆ 10.45 ರ ಸುಮಾರಿಗೆ ತಮ್ಮ  ಮನೆಯ ಡೋರ್ ಲಾಕ್ ಮತ್ತು ಹ್ಯಾಂಗಿಂಗ್ ಲಾಕ್ ಹಾಕಿಕೊಂಡು ಮಂಡ್ಯಕ್ಕೆ ಹೋಗಿದ್ದು, ನಂತರ ಬಂದು ನೋಡಿದಾಗ ಮನೆಯ ಮುಖ್ಯ ಬಾಗಿಲಿನ ಹ್ಯಾಂಗಿಂಗ್ ಲಾಕ್ ಹಾಕುವ ಚಿಲಕದ ಕೊಂಡಿಯನ್ನು ಹಾಗೂ ಡೋರ್ಲಾಕ್ ಅನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ತೆಗೆದಿದ್ದಾರೆ. ಒಳಗೆ ಹೋಗಿ ನೋಡಿದಾಗ ಲಾಕರ್ ನಲ್ಲಿ ಇಟ್ಟಿದ್ದ  20ಗ್ರಾಂ ತೂಕದ ಒಂದು ಚಿನ್ನದ ಚೈನ್, 15ಗ್ರಾಂ ತೂಕದ  ಒಂದು ಜೊತೆ ಕಿವಿಯ ಓಲೆ ಮತ್ತು ಜುಮುಕಿ, ಐದು ಗ್ರಾಂನ ಒಂದು ಚಿನ್ನದ ಉಂಗುರ, ಐದು ಗ್ರಾಂನ ಒಂದು ಜೊತೆ ಚಿನ್ನದ ಮಾಟಿಗಳು, 40000ರೂ.ನಗದು  ಹಣ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಒಟ್ಟು ಸುಮಾರು 45 ಗ್ರಾಂ ತೂಕದ ಚಿನ್ನದ ಒಡವೆಗಳು ಹಾಗೂ 40,000ರೂ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದು, ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: