ಪ್ರಮುಖ ಸುದ್ದಿ

ಕರ್ತವ್ಯದಲ್ಲಿರುವಾಗಲೇ ಮದ್ಯಪಾನ ಮಾಡಿ ಬಂದ ಹೋಂಗಾರ್ಡ್

ರಾಜ್ಯ(ಚಾಮರಾಜನಗರ)ಆ.27:- ಮದ್ಯಪಾನ ಸೇವಿಸಿ  ಹೋಂ ಗಾರ್ಡ್ ಪೇದೆಯೋರ್ವರು ಕರ್ತವ್ಯ ನಿರ್ವಹಿಸಿದ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಎಣ್ಣೆ ಹೊಡೆದು ಹೋಂಗಾರ್ಡ್ ನಂದೀಶ್ ಎಂಬವರು ಮದ್ಯಪಾನ ಸೇವಿಸಿ ಡ್ಯೂಟಿ ಮಾಡಿದ್ದಾರೆ. ಸಾಲದ್ದಕ್ಕೆ ಮನೆಗೆ ಹೋಗಿ ಮಾಡಿದ್ದೇನೆ ಎನ್ನುತ್ತಿದ್ದಾರೆ.  ಕರ್ತವ್ಯ ಮುಗಿಯದೇ, ಕರ್ತವ್ಯದಲ್ಲಿರುವಾಗಲೇ ಮದ್ಯಪಾನ ಸೇವಿಸಿ ಬಂದರೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳದೇ ಕಣ್ಮುಚ್ಚಿ ಕುಳಿತಿರುವ ಕುರಿತು ಸಾರ್ವಜನಿಕರಿಮದ ವ್ಯಾಪಕ ಟೀಕೆ ವ್ಯಕ್ತವಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: