ಪ್ರಮುಖ ಸುದ್ದಿ

ಭಕ್ತರ ಸಂತೆಯಾಗಿದ್ದ ಭಾರತೀಯರನ್ನು ಪೌರರನ್ನಾಗಿ ಮಾಡಿದ್ದು ಸಂವಿಧಾನ : ಡಾ.ಪುರುಷೋತ್ತಮ ಬಿಳಿಮಲೆ

ರಾಜ್ಯ(ಬೆಂಗಳೂರು)ಆ.27:- ವಿವಿಧ ಧರ್ಮಗಳಿಗೆ ಸೀಮಿತವಾಗಿ ಭಕ್ತರ ಸಂತೆಯಾಗಿದ್ದ ಭಾರತೀಯರನ್ನು ಪೌರರನ್ನಾಗಿ ಮಾಡಿದ್ದು ಸಂವಿಧಾನ ಎಂದು ನವದೆಹಲಿಯ ಜೆಎನ್‌ಯು ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.

ನಗರದ ಸೆಂಟ್ರಲ್ ಕಾಲೇಜಿನ ಸೆಂಟ್ರಲ್ ಹಾಲ್‌ನಲ್ಲಿ ಹೈ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಹೆಚ್.ಎಸ್.ನಾಗ ಮೋಹನ ದಾಸ್ ಅವರ ಸಂವಿಧಾನ ಓದು ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಂವಿಧಾನಕ್ಕೂ ಮೊದಲು ಮಂದಿರ, ಮಸೀದಿ, ಚರ್ಚ್ ಗಳಿಗೆ ಜನರು ಸೀಮಿತಗೊಂಡಿದ್ದರು. ಇವರೆಲ್ಲರನ್ನು ಒಟ್ಟುಗೂಡಿಸಿದ್ದೇ ಸಂವಿಧಾನ ಎಂದು ಹೇಳಿದರು. ಎಲ್ಲಾ ಭಾಷೆಗಳಿಗೂ ಸಮಾನ ಗೌರವ ತಂದುಕೊಟ್ಟಿದ್ದು ಸಂವಿಧಾನ. ಇದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡರೇ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು.

ಪ್ರತಿಯೊಂದಕ್ಕೂ ಕೆಲವರು ದೇವ ವಾಣಿ ಎನ್ನುತ್ತಾರೆ. ಆದರೆ ದೇವರಿಗೆ ವಾಣಿ ಕಟ್ಟಿದವರು ಯಾರು ಎಂದು ಪ್ರಶ್ನಿಸಿದ ಅವರು ಸಂವಿಧಾನ ವಿರೋಧಿಸುವವರು ಇದ್ದರೇ ಅಂತಹವರು ಭಾರತೀಯ ವಿರೋಧಿಗಳು ಎಂದು ಹೇಳಿದರು. ಹೆಣ್ಣು ಕದ್ದು ಗರ್ಭಿಣಿಯಾದರೇ ಅವಳ ಪತಿವ್ರತೆಯನ್ನು ಸಾಬೀತು ಪಡಿಸಲು ಬಿಸಿ ಗುಂಡು ಕೈಯಲ್ಲಿ ಇಡುತ್ತಿದ್ದರು. ಕೈ ಸುಡದಿದ್ದರೇ ಅವಳು ಪತಿವ್ರತೆ, ಸುಟ್ಟರೆ ಅಪವಿತ್ರವಾದವಳು ಎಂಬ ಕಾಲ ಘಟ್ಟದಲ್ಲಿ ನ್ಯಾಯದ ಕಲ್ಪನೆ ನೀಡಿದ್ದೇ ಸಂವಿಧಾನ ಎಂದು ಪುರುಷೋತ್ತಮ ಬಿಳಿ ಮಲೆ ಹೇಳಿದರು.

ನ್ಯಾಯ ಮೂರ್ತಿ ಹೆಚ್.ಎಸ್.ನಾಗಮೋಹನ್ ದಾಸ್, ಬೆಂಗಳೂರು ಕೇಂದ್ರ ವಿಶ್ವ ವಿದ್ಯಾಲಯದ ಉಪ ಕುಲಪತಿ ಪ್ರೊ.ವಿ.ಜಾಫೆಡ್ ಹಿರಿಯ ವಕೀಲರಾದ ಅಖಿಲ ವಿಂಧ್ಯಾ ಸಂದ್ರ ಸಮುದಾಯ ಸಂಘಟನೆಯ ಅಧ್ಯಕ್ಷ ಅಚಿತ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: