ಕರ್ನಾಟಕಪ್ರಮುಖ ಸುದ್ದಿ

ಮೆಟ್ರೋ ನಿಲ್ದಾಣಗಳಲ್ಲಿ ಇ-ಚಾರ್ಜಿಂಗ್ : ಮಾಲಿನ್ಯ ನಿಯಂತ್ರಣಕ್ಕೆ ಸಹಕಾರಿ

ಬೆಂಗಳೂರು (ಆ.27): ರಾಜಧಾನಿ ಬೆಂಗಳೂರಲ್ಲಿ ಮಾಲಿನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚು ಉತ್ತೇಜನ ನೀಡುವ ದೃಷ್ಟಿಯಿಂದ ವಾರದೊಳಗೆ ನಾಲ್ಕು ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಇ-ಚಾರ್ಜಿಂಗ್ ಸ್ಟೇಷನ್ ಗಳನ್ನು ಆರಂಭಿಸಲಾಗುತ್ತಿದೆ.

ಬೈಯಪ್ಪನಹಳ್ಳಿ, ಎಂಜಿ ರಸ್ತೆ, ನಾಯಂಡಹಳ್ಳಿ , ಜಯನಗರ ಮೆಟ್ರೋ ನಿಲ್ದಾಣಗಳಲ್ಲಿ ಇ-ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯಲಾಗುತ್ತಿದೆ. ಇನ್ನು ಒಂದೇ ವಾರದಲ್ಲಿ ಚಾರ್ಜಿಂಗ್ ಯಂತ್ರಗಳನ್ನು ಅಳವಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಎಲೆಕ್ಟ್ರಿಕ್ ವಾಹನಗಳನ್ನು ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಚಾರ್ಜಿಂಗ್ ಯಂತ್ರವನ್ನು ಅಳವಡಿಸಲಾಗುತ್ತಿದೆ.

ಚಾರ್ಜ್ ಮಾಡಿಕೊಳ್ಳುವ ವಿದ್ಯುತ್ ಯುನಿಟ್‌ಗೆ 4.85 ರೂ. ದರ ನಿಗದಿಪಡಿಸಲಾಗಿದೆ. ಇತ್ತೀಚೆಗೆ ಬೆಸ್ಕಾಂ ತನ್ನ ಕೆ.ಆರ್. ಸರ್ಕಲ್ ನ ಕಚೇರಿಯಲ್ಲಿ ಆರಂಭಿಸಿತ್ತು. ಇದರ ಜೊತೆಗೆ ನಗರದಲ್ಲಿ ಒಟ್ಟು 100 ಕಡೆಗಳಲ್ಲಿ ಚಾರ್ಜಿಂಗ್ ಆರಂಭಿಸಲು ಬೆಸ್ಕಾಂ ಆಲೋಚಿಸಿದೆ.

ಇದಕ್ಕಾಗಿ ಸ್ಥಳಗಳನ್ನು ಹುಡುಕಲಾಗುತ್ತಿದೆ. ಮೆಟ್ರೋ ನಿಲ್ದಾಣ ಸೇರಿದಂತೆ ಬಿಎಂಆರ್ ಸಿಲ್ ಹಾಗೂ ಬಿಬಿಎಂಪಿ ಆಸ್ತಿಗಳಲ್ಲಿ 300 ಕೇಂದ್ರಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಮುಂದಿನ ದಿನಗಳಲ್ಲಿ ಬೇಡಿಕೆಗೆ ತಕ್ಕಂತೆ ಮೆಟ್ರೋದ ಎಲ್ಲಾ ನಿಲ್ದಾಣಗಳಲ್ಲಿ ಚಾರ್ಜಿಂಗ್ ಘಟಕ ಆರಂಭಿಸಲು ನಿರ್ಧರಿಸಲಾಗಿದೆ. (ಎನ್.ಬಿ)

Leave a Reply

comments

Related Articles

error: