ಕ್ರೀಡೆ

ಏಷ್ಯನ್ ಗೇಮ್ಸ್ : ಫೈನಲ್ ಗೆ ಲಗ್ಗೆಯಿಟ್ಟ ಪಿ.ವಿ.ಸಿಂಧು

ವಿದೇಶ(ಜಕಾರ್ತ)ಆ.27:- ಇಂಡೋನೇಷಿಯಾದ ಜಕಾರ್ತದಲ್ಲಿ ನಡೆಯುತ್ತಿರುವ ಹದಿನೆಂಟನೆಯ ಏಷ್ಯನ್ ಗೇಮ್ಸ್ ನಲ್ಲಿ 9ನೇ ದಿನ ಭಾರತಕ್ಕೆ ಪದಕವೇನೋ ದೊರಕಿದೆ. ಇದೀಗ ಮಹಿಳಾ ಬ್ಯಾಡ್ ಮಿಂಟನ್ ಸಿಂಗಲ್ಸ್ ನಲ್ಲಿ ಪಿ.ವಿ.ಸಿಂಧು ಫೈನಲ್ ಗೆ ಲಗ್ಗೆ ಇಟ್ಟಿದ್ದು, ಏಷ್ಯನ್ ಗೇಮ್ಸ್ ನ ಬ್ಯಾಡ್ ಮಿಂಟನ್ ನಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಆಟಗಾರರಾಗಿದ್ದಾರೆ.

ಪಿ.ವಿ.ಸಿಂಧು ಇತಿಹಾಸ ರಚಿಸಿದ್ದು, ಜಪಾನ್ ನ ಅಕಾನೆ ಯಮಗುಚಿ ಅವರನ್ನು 21-17,15-21,21-10ರಿಂದ ಪರಾಜಯಗೊಳಿಸಿದ್ದಾರೆ.

ಪಿವಿ ಸಿಂಧು ಮತ್ತು ಟಾಯ್ ಸುಯಿ ನಡುವೆ ಫೈನಲ್ ಪಂದ್ಯ ನಡೆಯಲಿದ್ದು, ನಿಜವಾದ ಅಗ್ನಿಪರೀಕ್ಷೆ ಎದುರಾಗಿದೆ. ಕಳೆದ ಬಾರಿಯ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಸಿಂಧು ಕೈತಪ್ಪಿ ಹೋಗಿತ್ತು. ಈ ಬಾರಿ ಟಾಯ್ ಸಿಂಧುಗೆ ತಡೆಗೋಡೆಯಾಗಿದ್ದಾರೆ.ಸಿಂಧು ಅವರ ಮೇಲೆ ಇಡೀ ಭಾರತೀಯ ಕ್ರೀಡಾ ಪ್ರೇಮಿಗಳ ನಿರೀಕ್ಷೆಯಿದೆ.

(ಎಸ್.ಎಚ್)

Leave a Reply

comments

Related Articles

error: