ಸುದ್ದಿ ಸಂಕ್ಷಿಪ್ತ

ಪ್ರೊ.ಎಂ.ಹಿರಿಯಣ್ಣ ನೆನಪು : ಉಪನ್ಯಾಸ ನಾಳೆ

ಮೈಸೂರು,ಆ.27 : ಮೈಸೂರು ವಿವಿಯ ಪ್ರಾಚ್ಯ ವಿದ್ಯಾ ಸಂಶೋಧನಾಲಯ, ಮಹಾರಾಜ ಕಾಲೇಜಿನ ಸಂಸ್ಕೃತ ವಿಭಾಗ ಹಾಗೂ ಎನ್.ಸಿಸಿ ಘಟಕ ಸಂಯುಕ್ತಾಶ‍್ರಯದಲ್ಲಿ ಪ್ರೊ.ಎಂ.ಹಿರಿಯಣ್ಣ ನೆನಪಿನ ವಿಶೇಷ ಉಪನ್ಯಾಸ ರಾಷ್ಟ್ರೀಯ ಭಾವೈಕ್ಯತೆ ಮತ್ತು ಹಸ್ತಪ್ರತಿಗಳ ಮಹತ್ವ ಮತ್ತು ಸಂರಕ್ಷಣೆ ಕುರಿತ ಅರಿವು ಜಾಗೃತಿ ಕಾರ್ಯಕ್ರಮವನ್ನು ಆ.29ರ ಬೆಳಗ್ಗೆ 11ಕ್ಕೆ ಕಾಲೇಜಿನ ಜೂನಿಯರ್ ಬಿ.ಎ. ಹಾಲ್ ನಲ್ಲಿ ಏರ್ಪಡಿಸಲಾಗಿದೆ.

ತತ್ವಶಾಸ್ತ್ರ ಪ್ರಾಧ್ಯಾಪಕ ಪ್ರೊ.ವಿ.ಎನ್.ಶೇಷಗಿರಿ ರಾವ್ ಉದ್ಘಾಟಿಸುವರು, ಪ್ರಾಂಶುಪಾಲೆ ಪ್ರೊ.ಸಿ.ಪಿ.ಸುನೀತಾ ಅಧ್ಯಕ್ಷತೆ ವಹಿಸುವರು. ಮೈವಿವಿ ರಾಷ್ಟ್ರೀಯ ಭಾವೈಕ್ಯತೆ ರಾಷ್ಟ್ರೀಯ ಸೇವಾ ಯೋಜನೆಯ ವಿಶ್ರಾಂತ ಸಂಯೋಜನಾಧಿಕಾರಿ ಪ್ರೊ.ಬಿ.ಕೆ.ಶಿವಣ್ಣ, ಹಸ್ತಪ್ರತಿಶಾಸ್ತ್ರ ತಜ್ಞ ಡಾ.ಟಿ.ವಿ.ಸತ್ಯನಾರಾಯಣ ಉಪನ್ಯಾಸ ನೀಡುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: