ಕರ್ನಾಟಕಪ್ರಮುಖ ಸುದ್ದಿ

ಶರಣ್ ಜೊತೆ ರವಿಶಂಕರ್ ಕೂಡ ಹೆಣ್ಣಾದರು!

ಬೆಂಗಳೂರು (ಆ.27): ನಟ ಶರಣ್ ಹಾಗೂ ರವಿಶಂಕರ್ ಮತ್ತೆ ಈಗ ಒಂದಾಗಿದ್ದಾರೆ. ವಿಶೇಷ ಅಂದರೆ ಇಬ್ಬರೂ ಕೂಡ ಹೆಣ್ಣಿನ ವೇಷದಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ! ಅಂದಹಾಗೆ ಈ ಇಬ್ಬರೂ ನಟರು ಈ ರೀತಿ ಬದಲಾಗಿರುವುದು ‘ವಿಕ್ಟರಿ 2’ ಸಿನಿಮಾಗಾಗಿ.

ಈ ಸಿನಿಮಾದ ಮೇಕಿಂಗ್ ಫೋಟೋಗಳು ಬಿಡುಗಡೆಯಾಗಿದ್ದು, ಶರಣ್ ಹಾಗೂ ರವಿಶಂಕರ್ ಹೆಣ್ಣಿನ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ‘ಜೈ ಲಲಿತಾ’ ಸಿನಿಮಾದಲ್ಲಿ ಕೂಡ ಶರಣ್ ಈ ರೀತಿ ಲುಕ್ ನಲ್ಲಿ ಇದ್ದರು. ಶರಣ್ ‘ರಾಂಬೋ 2’ ಯಶಸ್ಸಿನ ನಂತರ ಶರಣ್ ‘ವಿಕ್ಟರಿ 2’ ಸಿನಿಮಾವನ್ನು ಮಾಡುತ್ತಿದ್ದಾರೆ.

ಅಂದಹಾಗೆ ‘ವಿಕ್ಟರಿ 2’ ಸಿನಿಮಾವನ್ನು ಹರಿ ಸಂತೋಷ್ (ಅಲೆಮಾರಿ ಸಂತು) ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾದ ಹಾಡಿನ ಚಿತ್ರೀಕರಣ ರಷ್ಯಾದಲ್ಲಿ ನಡೆದಿದೆ. ಈ ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ಶರಣ್‍ಗೆ ಜೋಡಿಯಾಗಿ ಅಪೂರ್ವ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ‘ವಿಕ್ಟರಿ’ ಸಿನಿಮಾದಲ್ಲಿ ನಟಿಸಿದ್ದ ಅಸ್ಮಿತಾ ಸೂದ್ ಕೂಡ ಇಲ್ಲಿ ಕಾಣಿಸಿಕೊಂಡಿದ್ದಾರೆ. (ಎನ್.ಬಿ)

Leave a Reply

comments

Related Articles

error: