ಪ್ರಮುಖ ಸುದ್ದಿಮೈಸೂರು

ಕೆ.ಆರ್.ಪೇಟೆ ತಹಶೀಲ್ದಾರ್ ಅಪಹರಣ ಪ್ರಕರಣ : ನಾಲ್ವರು ಪೊಲೀಸ್ ವಶಕ್ಕೆ : ಬಂಧಿತರಿಂದ ಸ್ಪೋಟಕ ಮಾಹಿತಿ

ಮೈಸೂರು,ಆ.28:-ಕೆ.ಆರ್.ಪೇಟೆ ತಹಶೀಲ್ದಾರ್ ಮಹೇಶ್ಚಂದ್ರ  ಅಪಹರಣ ಶಂಕೆ ವ್ಯಕ್ತವಾಗಿದೆ. ಅವರ ಕಾರು ಮೈಸೂರು ಕೆ.ಆರ್.ನಗರ ತಾಲೂಕಿನ ಚಿಕ್ಕವಡ್ಡರಗುಡಿ ಗ್ರಾಮದ ಬಳಿ ಅವರ ಕಾರು ಪತ್ತೆಯಾಗಿದೆ ಎಂದು ಆಗಸ್ಟ್ 3ರಂದು ವರದಿಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಆರ್.ನಗರ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಅಪಹರಣದ ಕಾರಣ ಕೇಳಿದರೆ ಬೆಚ್ಚಿ ಬೀಳುವಂತಿದೆ.

ಕೆ.ಆರ್.ನಗರ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಕೆ.ಆರ್.ಪೇಟೆ ತಹಶೀಲ್ದಾರ್ ರನ್ನು ಅಪಹರಿಸಿದ್ದ  ನಾಲ್ವರು ಅಪಹರಣಕಾರರನ್ನು ಬಂಧಿಸಿದ್ದಾರೆ. ಬಂಧಿತರನ್ನು ರೈಲ್ವೇ ಇಲಾಖೆಯಲ್ಲಿ ಸ್ಟೋರ್ ಕೀಪರ್ ಆಗಿರುವ ಕೆ.ಆರ್.ಪೇಟೆಯ ಯೋಗೇಂದ್ರ.ಕೆ.ಎನ್.(30)  ಖಾಸಗಿ ಹೋಟೆಲ್ ಕ್ಯಾಪ್ಟನ್ ಆಗಿರುವ ಸೋಮಶೇಖರ್ ಎಸ್.ಎನ್.(31) ,ಕಾರು ಚಾಲಕನಾಗಿರುವ ಚಂದು. ಎಸ್.ಎಸ್.(24), ಮೈಸೂರಿನ ಬೃಂದಾವನ ಬಡಾವಣೆಯ ದೀಪು. ಎಸ್.ಎನ್.(28) ಎಂದು ಗುರುತಿಸಲಾಗಿದೆ.

ಆಗಸ್ಟ್ 3 ರಂದು ಮಹೇಶ್ ಚಂದ್ರ ಅಪಹರಣವಾಗಿತ್ತು. ಕೆ.ಆರ್.ನಗರದ ಹೊಸ ಅಗ್ರಹಾರದ ಬಳಿ ತಹಶೀಲ್ದಾರ್ ಅವರನ್ನು ಈ ಖದೀಮರು ಅಪಹರಿಸಿದ್ದರು. ಅಪಹರಣವಾಗುವ ಕೇವಲ ಒಂದು ವಾರದ ಹಿಂದೆ ಕೆ.ಆರ್.ಪೇಟೆಗೆ ವರ್ಗಾವಣೆಯಾಗಿ ಮಹೇಶ್ ಚಂದ್ರ ಬಂದಿದ್ದರು.  ಬಂಧಿತರು ವಿಚಾರಣೆಯ ವೇಳೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ರೈತರ ಸಾಲ ಮನ್ನಾಗಾಗಿ ಒತ್ತೆಯಾಳಾಗಿ ಇಟ್ಟುಕೊಳ್ಳುವ ಉದ್ದೇಶ ಅಪಹರಣಕಾರರದ್ದಾಗಿತ್ತು ಎನ್ನಲಾಗಿದೆ. ರೈತರ ಸಾಲಮನ್ನಾಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ತಹಶೀಲ್ದಾರ್ ರನ್ನು  ಅಪಹರಿಸಿದ್ದರಂತೆ. ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ನೀಡಿ ಹೆಚ್ಚಿನ ವಿಚಾರಣೆಗಾಗಿ 3 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ತಹಶೀಲ್ದಾರ್ ಅಪಹರಣದ ವೇಳೆ ಚಿಕ್ಕವಡ್ಡರಗುಡಿ ಗ್ರಾಮದ ಮುಖ್ಯರಸ್ತೆಯಲ್ಲಿ  ಮಾರುತಿ ಓಮ್ನಿ ಕಾರ್ ಹಾಗೂ ಅವರ ಶೂ ಪತ್ತೆಯಾಗಿತ್ತು. ಸ್ಥಳಕ್ಕೆ ವೃತ್ತ ನಿರೀಕ್ಷಕ ಕೆ.ರಘು, ಸಾಲಿಗ್ರಾಮ ಎಸ್.ಐ ಮಹೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: