ಪ್ರಮುಖ ಸುದ್ದಿಮೈಸೂರು

ಕೊಡಗಿನ ಪುನಶ್ಚೇತನಕ್ಕೆ 50ಲಕ್ಷರೂ.ಚೆಕ್ ನ್ನು ಸಿಎಂ ಗೆ ಹಸ್ತಾಂತರಿಸಿದ ಸುತ್ತೂರು ಶ್ರೀ

ಶ್ರೀ ಚೆನ್ನವೀರ ದೇಶಿಕೇಂದ್ರ ಗುರುಕುಲದ ಉದ್ಘಾಟನೆ

ಮೈಸೂರು,ಆ.28:- ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 103ನೇ ಜಯಂತಿ ಮಹೋತ್ಸವ ಹಾಗೂ ಶ್ರೀ ಚೆನ್ನವೀರ ದೇಶಿಕೇಂದ್ರ ಗುರುಕುಲದ ಉದ್ಘಾಟನಾ ಕಾರ್ಯಕ್ರಮವಿಂದು ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ನಡೆಯುತ್ತಿದ್ದು, ಇದೇ ವೇಳೆ ಪ್ರವಾಹದಿಂದ ತತ್ತರಿಸಿದ ಕೊಡಗನ್ನು ಪುನರ್ ನಿರ್ಮಿಸಲು ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಸುತ್ತೂರು‌ ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ವತಿಯಿಂದ 50 ಲಕ್ಷ ರೂ.ಗಳ ದೇಣಿಗೆಯನ್ನು ಚೆಕ್ ಮೂಲಕ ಸುತ್ತೂರು  ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಹಸ್ತಾಂತರಿಸಿದರು.

ಇದೇ ವೇಳೆ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಶ್ರೀ ಚೆನ್ನವೀರ ದೇಶಿಕೇಂದ್ರ ಗುರುಕುಲದ ಉದ್ಘಾಟನೆಯನ್ನು ನೆರವೇರಿಸಿದರು.  ಈ ವೇಳೆ ಸಿದ್ಧಗಂಗಾ ಕ್ಷೇತ್ರದ ಸಿದ್ಧಲಿಂಗ ಮಹಾಸ್ವಾಮೀಜಿ, ಸುತ್ತೂರು ಕಿರಿಯ ಶ್ರೀಗಳು, ಸಚಿವರುಗಳಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು, ಸಿ.ಪುಟ್ಟರಂಗಶೆಟ್ಟಿ, ಎನ್.ಮಹೇಶ್, ಸಂಸದರಾದ ಆರ್.ಧ್ರುವನಾರಾಯಣ್, ಶಾಸಕ ಯತೀಂದ್ರ ಸಿದ್ದರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: