ಕರ್ನಾಟಕಪ್ರಮುಖ ಸುದ್ದಿ

ಸ್ಥಳೀಯರಿಗೆ ಉದ್ಯೋಗ ನೀಡಿ: ಟೊಯೊಟ ಕಿರ್ಲೋಸ್ಕರ್ ಅಧಿಕಾರಿಗಳಿಗೆ ಸಿಎಂ ಒತ್ತಾಯ

ಬೆಂಗಳೂರು (ಆ.28): ಟೊಯೋಟಾ ಕಿರ್ಲೋಸ್ಕರ್ ಸಂಸ್ಥೆಯಲ್ಲಿ ಹಿರಿಯ ಅಧಿಕಾರಿಗಳು ಇಂದು ವಿಧಾನಸೌಧಕ್ಕೆ ಭೇಟಿ ನೀಡಿ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದರು. ಟೊಯೋಟ ಕಿರ್ಲೋಸ್ಕರ್‌ ಸಂಸ್ಥೆಯಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡುವಂತೆ ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು, ಟೊಯೋಟ ಅಧಿಕಾರಿಗಳ ಬಳಿ ಒತ್ತಾಯ ಮಾಡಿದರು.

ಟೊಯೋಟ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಕಿಟೋ ತಚಿಬಾನ ಹಾಗೂ ನಿರ್ದೇಶಕ ಮತ್ತು ಉಪಾಧ್ಯಕ್ಷ ಶೇಖರ್ ವಿಶ್ವನಾಥನ್ ಇನ್ನೂ ಹಲವರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು. ವಾಹನಗಳ ಮೇಲಿನ ತೆರಿಗೆ ವೆಚ್ಚ ಶೇ. 43 ರಷ್ಟು ಹೆಚ್ಚಿಸಲಾಗಿದ್ದು, ಜಿ.ಎಸ್.ಟಿ ಕಡಿಮೆ ಮಾಡಿಸುವಂತೆ ಸಂಸ್ಥೆಯ ನಿರ್ದೇಶಕರು ಮನವಿ ಮಾಡಿದರು. ಈ ಬಗ್ಗೆ ಮನವಿಯನ್ನು ಸಲ್ಲಿಸಿದಲ್ಲಿ ಕೇಂದ್ರ ಸರ್ಕಾರದೊoದಿಗೆ ಚರ್ಚಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು ಎಂದು ತಿಳಿದುಬಂದಿದೆ. (ಎನ್.ಬಿ)

Leave a Reply

comments

Related Articles

error: