ಕರ್ನಾಟಕಪ್ರಮುಖ ಸುದ್ದಿ

5 ವರ್ಷ ಎಚ್‍ಡಿಕೆ ಸಿಎಂ – ಒಪ್ಪಂದ ಆಗಿದೆ, ಚರ್ಚೆ ಅನಾವಶ್ಯಕ : ದಿನೇಶ್ ಗುಂಡೂರಾವ್

ದಾವಣಗೆರೆ (ಆ.28): ಜೆಡಿಎಸ್ ಜೊತೆ ಕಾಂಗ್ರೆಸ್‍ ಪಕ್ಷ ಮಾಡಿಕೊಂಡಿರುವ ಒಪ್ಪಂದದಂತೆ 5 ವರ್ಷಗಳ ಕಾಲ ಕುಮಾರಸ್ವಾಮಿಯವರೇ ಮುಖ್ಯಮಂತ್ರಿ ಆಗಿರಲಿದ್ದಾರೆ. ಈ ಬಗ್ಗೆ ಅನುಮಾನ ಬೇಡ, ಚರ್ಚೆಯೂ ಅನವಶ್ಯಕ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ನೇತೃತದ್ವದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ನಾವು 5 ವರ್ಷಗಳ ಕಾಲ ಮುಖ್ಯಮಂತ್ರಿ ಬದಲಾವಣೆ ಮಾಡುವುದಿಲ್ಲವೆಂದು ಒಪ್ಪಂದ ಮಾಡಿಕೊಟ್ಟಿದ್ದೇವೆ. ಆದ್ದರಿಂದ ಈ ಒಪ್ಪಂದ ಮುಗಿಯುವವರೆಗೂ ಸಿಎಂ ಬಗ್ಗೆ ಚರ್ಚೆ ಮಾಡುವುದು ಅನಾವಶ್ಯಕ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.(ಎನ್.ಬಿ)

Leave a Reply

comments

Related Articles

error: