ದೇಶಪ್ರಮುಖ ಸುದ್ದಿ

ಮತದಾರರ ಪಟ್ಟಿಗೆ ಆಧಾರ್ ಜೋಡಿಸಲು ರಾಜಕೀಯ ಪಕ್ಷಗಳ ಮನವಿ

ನವದೆಹಲಿ (ಆ.28): ಮುಂದಿನ ಚುನಾವಣೆಗೆ ಮತಪತ್ರ ಮಾದರಿ ಜಾರಿಗೆ ತರುವಂತೆ ಕಾಂಗ್ರೆಸ್ ಪಕ್ಷ ಒತ್ತಾಯಿಸುತ್ತಿರುವ ಬೆನ್ನಲ್ಲೆ ಬಿಜೆಪಿ ಸೇರಿದಂತೆ ಕೆಲವು ಪ್ರತಿಪಕ್ಷಗಳು ಮತದಾರರ ಪಟ್ಟಿಗೆ ಆಧಾರ್ ಸಂಖ್ಯೆಯನ್ನು ಲಗತ್ತಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿವೆ.

ಈ ವರ್ಷ 4 ರಾಜ್ಯಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆ ಹಾಗೂ ಮುಂದಿನ ವರ್ಷದ ಲೋಕಸಭಾ ಚುನಾವಣೆ ಪ್ರಯುಕ್ತ ಸೋಮವಾರ ಚುನಾವಣಾ ಆಯೋಗವು ಏಳು ರಾಷ್ಟ್ರೀಯ ಪಕ್ಷಗಳು ಮತ್ತು 51 ರಾಜ್ಯ ರಾಜಕೀಯ ಪಕ್ಷಗಳ ಸಭೆ ಕರೆದಿತ್ತು. ಈ ಸಭೆಯಲ್ಲಿ ದೋಷಪೂರಿತ ವಿದ್ಯುನ್ಮಾನ ಮತಯಂತ್ರದ (ಎಇವಿಎಂ) ಬಗ್ಗೆ ಚರ್ಚೆ ನಡೆಸಿದ ಪಕ್ಷಗಳು ಮತಪತ್ರ ಮಾದರಿ ಅಥವಾ ಮತದಾರರ ಆಧಾರ್ ಸಂಖ್ಯೆ ಸೇರಿಸುವಂತೆ ತಿಳಿಸಿವೆ. ಇದರಿಂದ ಮತದಾರರ ಪಟ್ಟಿಯಲ್ಲಿರುವ ನಕಲಿ ಹೆಸರುಗಳನ್ನು ತೆಗೆದುಹಾಕಲು ಈ ಪ್ರಕ್ರಿಯೆ ಅನುಕೂಲವಾಗಲಿವೆ ಹಾಗೂ ಚುನಾವಣಾ ನಿರ್ವಹಣೆಗೂ ನೆರವಾಗಲಿವೆ ಎಂದು ಅಭಿಪ್ರಾಯಪಟ್ಟಿವೆ.

ಈ ಮನವಿಗೆ ಪ್ರತಿಕ್ರಿಯಿಸಿರುವ ಮುಖ್ಯ ಚುನಾವಣಾ ಆಯುಕ್ತ ಓ.ಪಿ.ರಾವತ್ ಅವರು, ರಾಜಕೀಯ ಪಕ್ಷಗಳು ನೀಡಿರುವ ಸಲಹೆ- ಸೂಚನೆಗಳ ಕಡೆ ಗಮನ ಹರಿಸಲಿದ್ದೇವೆ. ತೃಪ್ತಿದಾಯಕ ಪರಿಹಾರ ನೀಡಲಿದ್ದೇವೆ ಎಂದು ಭರವಸೆ ನೀಡಿದ್ದಾರೆ. (ಎನ್.ಬಿ)

Leave a Reply

comments

Related Articles

error: