ದೇಶಪ್ರಮುಖ ಸುದ್ದಿ

ಭಾರತಕ್ಕೆ ಹಿಂದಿರುಗಲು ಚಿಂತನೆ ನಡೆಸಿದ್ದಾರಂತೆ ಮದ್ಯದ ದೊರೆ

ದೇಶ(ನವದೆಹಲಿ)ಆ.28:- ಮದ್ಯದ ದೊರೆ ವಿಜಯ್ ಮಲ್ಯ ಭಾರತಕ್ಕೆ ಹಿಂದಿರುಗಲು ಚಿಂತನೆ ನಡೆಸಿದ್ದಾರಂತೆ. ಭಾರತೀಯ ಬ್ಯಾಂಕ್ ಗಳಿಂದ ಕೋಟ್ಯಾಂತರ ರೂ.ಸಾಲ ಪಡೆದು ಲಂಡನ್ ಗೆ ಓಡಿದ್ದರು.

ಆಸ್ತಿ ಉಳಿಸಿಕೊಳ್ಳಬೇಕಾದರೆ ತಾನು ಭಾರತಕ್ಕೆ ಹಿಂದಿರುಗಲೇ ಬೇಕು. ಇಲ್ಲದಿದ್ದಲ್ಲಿ ಆಸ್ತಿ ಕಳೆದುಕೊಳ್ಳುತ್ತೇನೆಂಬ ಭಯ ಮಲ್ಯರನ್ನು ಕಾಡಿದೆ ಎನ್ನಲಾಗುತ್ತಿದ್ದು, ಈ ನಿರ್ಧಾರಕ್ಕೆ ಬರುತ್ತಿದ್ದಾರೆ ಎನ್ನಲಾಗಿದೆ. ಬ್ಯಾಂಕ್ ಗಳಿಗೆ ಭಾರೀ ನಷ್ಟ ಮಾಡಿ ವಿದೇಶಕ್ಕೆ ಪರಾರಿಯಾದ ಅಪರಾಧಿಗಳ ಆಸ್ತಿಯನ್ನು ಒಮ್ಮೆ ಜಪ್ತಿ ಮಾಡಿದರೆ ಮತ್ತೆಂದು ಅದನ್ನು ಮತ್ತೆಂದೂ ಹಿಂಪಡೆಯಲು ಹೊಸ ಮಸೂದೆಯನ್ವಯ ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಈಗಾಗಲೇ ಜಾರಿ ನಿರ್ದೇಶನಾಲಯ 13,500ಕೂ.ರೂ.ಮೌಲ್ಯದ ಆಸ್ತಿ ಜಪ್ತಿ ಮಾಡಿದ್ದು, ಈಗಾಗಲೇ ಕಳೆದುಕೊಂಡಿರುವ ಆಸ್ತಿ ಹಿಂಪಡೆಯಲು ಹೊಸ ಮಾರ್ಗ ಹುಡುಕುತ್ತಿದ್ದಾರೆ ಎನ್ನಲಾಗಿದೆ. (ಎಸ್.ಎಚ್)

Leave a Reply

comments

Related Articles

error: