ಕ್ರೀಡೆ

ಏಷ್ಯನ್ ಗೇಮ್ಸ್ : ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟ ಪಿ.ವಿ.ಸಿಂಧು

ವಿದೇಶ(ಜಕಾರ್ತ)ಆ.28:- ಇಂಡೋನೇಷಿಯಾದ ಜಕಾರ್ತದಲ್ಲಿ ನಡೆಯುತ್ತಿರುವ ಹದಿನೆಂಟನೇ ಏಷ್ಯನ್ ಗೇಮ್ಸ್ ನಲ್ಲಿ ಮಹಿಳೆಯರ ಸಿಂಗಲ್ಸ್ ಬ್ಯಾಡ್ ಮಿಂಟನ್ ನಲ್ಲಿ  ಪಿ.ವಿ.ಸಿಂಧು ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ.

ಏಷ್ಯನ್ ಗೇಮ್ಸ್ ನ ಹತ್ತನೇ ದಿನ ಭಾರತಕ್ಕೆ ಬೆಳ್ಳಿ ದೊರಕಿದೆ. ಚೀನಾದ ತೈಪೆ ಕಿ ತೈ ಜುಯಿಂಗ್ ಸಿಂಧು ಅವರನ್ನು 13-21, 16-21ರಿಂದ ಮಣಿಸಿ ಚಿನ್ನವನ್ನು ತಮ್ಮದಾಗಿಸಿಕೊಂಡರು. ಎರಡನೇ ಸುತ್ತಿನಲ್ಲಿ 18-11ರಿಂದ ಸಿಂಧು ಹಿಂದುಳಿದಿದ್ದು, ಬಹುತೇಕ ಅವರಿಂದ ಆಟ ಕೈತಪ್ಪಿ ಹೋಗುವುದು ನಿಶ್ಚಿತವಾಗತೊಡಗಿತ್ತು. ಬ್ಯಾಡ್ ಮಿಂಟನ್ ನಲ್ಲಿ ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಪಡೆದ ಮೊದಲ ಆಟಗಾರ್ತಿಯಾಗಿದ್ದಾರೆ. (ಎಸ್.ಎಚ್)

Leave a Reply

comments

Related Articles

error: