ಮನರಂಜನೆಮೈಸೂರು

ಸಿನಿ ಪ್ರಿಯರ ಮನಗೆದ್ದಿರುವ ‘ಒಂದಲ್ಲಾ ಎರಡಲ್ಲಾ’ ಚಲನಚಿತ್ರ

35 ಕೇಂದ್ರಗಳಲ್ಲಿ ಯಶಸ್ವಿ ಪ್ರದರ್ಶನ

ಮೈಸೂರು,ಆ.28 :  ರಾಮಾ ರಾಮಾ ರೇ ಚಿತ್ರದ ನಿರ್ದೇಶಕ ಡಿ.ಸತ್ಯಪ್ರಕಾಶ್ ಅವರ ಎರಡನೇ ಚಿತ್ರ ‘ಒಂದಲ್ಲಾ ಎರಡಲ್ಲಾ’ ರಾಜ್ಯಾದ್ಯಾದಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಿನಿ ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಚಿತ್ರನಟ ನಾಗಭೂಷಣ್ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಳೆ ಮಗುವಿನ ಮುಗ್ಧತೆಯನ್ನೇ ಕಥಾ ವಸ್ತುವನ್ನಾಗಿ ಬಳಸಿ ಡಿ. ಎನ್. ಸಿನಿಮಾಸ್ ಸಂಸ್ಥೆ ನಿರ್ಮಾಣದಲ್ಲಿ ಮೂಡಿದ ಚಿತ್ರದಲ್ಲಿ ನಾಯಕ-ನಾಯಕಿ ವೈಭವ ಇಲ್ಲದೇ ಅತ್ಯಂತ ಮನಮುಟ್ಟುವಂತೆ. ಮೂಡಿದೆ. ಆ.24ರಂದು ರಾಜ್ಯದ 80 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು,  ಬೆಂಗಳೂರು, ಮೈಸೂರು ಸೇರಿದಂತೆ 35 ಕೇಂದ್ರಗಳಲ್ಲಿ ಇಂದಿಗೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಎಂದು ತಿಳಿಸಿದರು.

ಚಿತ್ರದ ಪ್ರಮುಖ ಪಾತ್ರಕ್ಕೆ ಪಾಂಡವಪುರದ 8 ವರ್ಷದ ಪೋರ ಮಾಸ್ಟರ್ ರೋಹಿತ್ ಜೀವ ತುಂಬಿದ್ದು, ತಾನು ಕಳೆದುಕೊಂಡ ವಸ್ತುವಿನ ಹುಡುಕಾಟದಲ್ಲಿ ಒದಗುವ ಸನ್ನಿವೇಶಗಳನ್ನು ಎಳೆ ಏಳೆಯಾಗಿ ಬಿಡಿಸಲಾಗಿದ್ದು ಆತನ ಸಹಜ ಮುಗ್ಧ ಅಭಿನಯವೇ ಚಿತ್ರದ ಜೀವಾಳವಾಗಿದ್ದು ಪ್ರೇಕ್ಷಕರ ಮನ ಮಿಡಿಸುವುದು ಎಂದರು.

ಚಿತ್ರ ನಟ ನಟರಾಜ್ ಮಾತನಾಡಿ, ರಾಯಚೂರು ಸೇರಿದಂತೆ ರಾಜ್ಯದ ಹಲವಾರು ಪ್ರದೇಶಗಳ ರಂಗ ಕಲಾವಿದರು ಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದು ಸಂಪೂರ್ಣ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದ್ದು ಮನೆ ಮಂದಿಯೆಲ್ಲ ಕುಳಿತು ನೋಡುವ ಸುಂದರ ಚಿತ್ರವಾಗಿದ್ದು ಚಿತ್ರಕಥೆ ಉತ್ತಮವಾಗಿದ್ದರೆ ಪ್ರೇಕ್ಷಕರು ಮುಕ್ತ ಮನಸ್ಸಿನಿಂದ ಸ್ವಾಗತಿಸುವರು ಎನ್ನುವುದಕ್ಕೆ ಈ ಚಿತ್ರ ಸಾಕ್ಷಿಭೂತವಾಗಿದೆ ಎಂದರು.

ಚಿತ್ರದ ಪ್ರಮುಖ ಪಾತ್ರಧಾರಿ ಮಾಸ್ಟರ್ ರೋಹಿತ್ ಮಾತನಾಡಿ, ಇದು ಕೇವಲ ಮಕ್ಕಳಿಗಾಗಿ ಅಲ್ಲ ಪ್ರತಿಯೊಬ್ಬರು ನೋಡಬಹುದಾದ ಚಿತ್ರ ಎಲ್ಲರೂ ನೋಡಿ ಎಂದು ಮುಗ್ಧವಾಗಿ ನುಡಿದ.

ಪತ್ರಕರ್ತ ಮಂಜುನಾಥ್ ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: