ಮೈಸೂರು

ಬುದ್ಧಿವಾದ ಹೇಳಲು ಕರೆದುಕೊಂಡು ಹೋಗುತ್ತಿದ್ದ ವೇಳೆ ಕಾರಿನಿಂದ ಜಿಗಿದ ವಿದ್ಯಾರ್ಥಿ- ವಿದ್ಯಾರ್ಥಿನಿ

ಮೈಸೂರು,ಆ.28:- ಕಾರಿನಲ್ಲಿ ಬುದ್ಧಿವಾದ ಹೇಳಲು ಕರೆದುಕೊಂಡು ಹೋಗುತ್ತಿದ್ದ ವೇಳೆ ಕಾಲೇಜೊಂದರ ವಿದ್ಯಾರ್ಥಿ-ವಿದ್ಯಾರ್ಥಿನಿ ಕಾರಿನಿಂದಲೇ ಜಿಗಿದ ಘಟನೆ ನಗರದ ಅಶೋಕ ರಸ್ತೆಯಲ್ಲಿ ನಡೆದಿದೆ. ಕಣ್ಣೆದುರೇ ನಡೆದ ಘಟನೆಯಿಂದ ಜನರು ಬೆಚ್ಚಿಬಿದ್ದಿದ್ದಾರೆ.

ಇಲ್ಲಿನ ಕಾಲೇಜೊಂದರಲ್ಲಿ ಓದುತ್ತಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿ ಪ್ರೀತಿ-ಪ್ರೇಮ ಎಂದು  ಸುತ್ತುತ್ತಿದ್ದರೆಂದು ಯುವತಿಯ ಅಣ್ಣ ಯಾರಿಂದಲೋ ಮಾಹಿತಿ ಪಡೆದಿದ್ದ.  ಈ ಸಂಬಂಧ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯ ಅಣ್ಣನ ನಡುವೆ ಗಲಾಟೆಯೂ ನಡೆದಿತ್ತು. ಇಂದು ಕಾಲೇಜು ಬಳಿ ಬಂದ ಯುವತಿಯ ಅಣ್ಣ ಕಾಲೇಜಿಗೆ ಓದಲು ಕಳುಹಿಸಿದರೆ ಪ್ರೀತಿ, ಪ್ರೇಮವೆಂದು ಸುತ್ತಾಡುತ್ತಿದ್ದಾರೆ ಎಂದು ನಡುರಸ್ತೆಯಲ್ಲೇ ಇಬ್ಬರ ಮೇಲೆಯೂ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.  ಬಳಿಕ ಇಬ್ಬರನ್ನೂ  ಕಾರಿನಲ್ಲಿ ಕೂರಿಸಿಕೊಂಡು ಬುದ್ಧಿ ಹೇಳಲು ಕರೆದುಕೊಂಡು ಹೋಗುತ್ತಿದ್ದ  ಈ ವೇಳೆ ಇಬ್ಬರೂ ಕೂಡ ಕಾರಿನಿಂದ ಜಿಗಿದಿದ್ದಾರೆ. ದೃಶ್ಯ ನೋಡಲು ಭಯಾನಕವಾಗಿತ್ತು ಎಂದು ಸಾರ್ವಜನಿಕರು ವಿವರಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: