ಕರ್ನಾಟಕಪ್ರಮುಖ ಸುದ್ದಿ

ಸಿ.ಎಂ ಕುಮಾರಸ್ವಾಮಿ ಭೇಟಿಗಾಗಿ ಎರಡೂವರೆ ತಾಸು ಕಾದು ವಾಪಸಾದ ಭಾರತಿ ವಿಷ್ಣುವರ್ಧನ್!

ಬೆಂಗಳೂರು (ಆ.28): ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ನಟಿ ಭಾರತಿ ವಿಷ್ಣುವರ್ಧನ್‌ ಮತ್ತು ಅಳಿಯ ಅನಿರುದ್ಧ ಅವರು ತಾಸುಗಟ್ಟಲೆ ಕಾದು ವಾಪಸ್‌ ಹಿಂತಿರುಗಿದ ಘಟನೆ ನಡೆದಿದೆ.

ನಟ ದಿವಂಗತ ವಿಷ್ಣುವರ್ಧನ್‌ ಸ್ಮಾರಕ ಸ್ಥಳಾಂತರ ವಿಚಾರಕ್ಕೆ ಸಂಬಂಧಪಟ್ಟಂತೆ ಸೋಮವಾರ ಸಂಜೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಭಾರತಿ ವಿಷ್ಣುವರ್ಧನ್ ಅವರು ಆಗಮಿಸಿದ್ದರು. ಭೇಟಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಭಾರತಿ ವಿಷ್ಣುವರ್ಧನ್‌ ಅವರಿಗೆ ಸಮಯವನ್ನೂ ಸಹ ನೀಡಿದ್ದರು.

ಆದರೆ, ಮುಖ್ಯಮಂತ್ರಿಗಳು ಕೊಡಗು ಪ್ರವಾಹ ಪರಿಹಾರ ಮತ್ತು ಇನ್ನಿತರೆ ಅಧಿಕಾರಿಗಳ ಜೊತೆ ಸಾಲು ಸಾಲು ಸಭೆಗಳಲ್ಲಿ ಭಾಗಿಯಾಗಿದ್ದ ಸಮಯಾವಕಾಶವಾಗದೆ ಭಾರತಿ ಅವರನ್ನು ಭೇಟಿ ಮಾಡಲು ಸಾಧ್ಯವಾಲಿಲ್ಲ ಎನ್ನಲಾಗಿದೆ.

ಹೀಗಾಗಿ ಸುಮಾರು ಎರಡು ತಾಸುಗಳ ಕಾಲ ಕಾದು ಕುಳಿತರೂ ಭೇಟಿ ಸಾಧ್ಯವಾಗದ ಕಾರಣ ಭಾರತಿ ಅವರು ಮತ್ತು ಅವರ ಅಳಿಯ ಅನಿರುದ್ಧ್  ಹಿಂತಿರುಗುವ ನಿರ್ಧಾರ ಕೈಗೊಂಡರು. “ಮತ್ತೊಮ್ಮೆ ಮುಖ್ಯಮಂತ್ರಿಗಳ ಭೇಟಿಗೆ ಸಮಯ ಕೇಳಿ ವಿಷ್ಣುವರ್ಧನ್‌ ಸ್ಮಾರಕ ಸ್ಥಳಾಂತರ ಕುರಿತು ಚರ್ಚಿಸಲಾಗುವುದು” ಎಂದು ನಂತರ ಅನಿರುದ್ಧ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: