ಸುದ್ದಿ ಸಂಕ್ಷಿಪ್ತ

ಸ್ವರ್ಣ ಕುಟೀರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿ ಟಿ.ಆರ್.ಜಗದೀಶ್ ಗೌಡ ಆಯ್ಕೆ

ಮೈಸೂರು,ಆ.28 : ದೇವರಾಜ ಮೊಹಲ್ಲಾದ ಸ್ವರ್ಣ ಕುಟೀರ ಗೃಹ ನಿರ್ಮಾಣ ಸಹಕಾರ ಸಂಘದ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ‍್ಯಕ್ಷರಾಗಿ ಟಿ.ಆರ್.ಜಗದೀಶ್ ಗೌಡ, ಉಪಾಧ್ಯಕ್ಷರಾಗಿ ಕೆ.ರವಿ ಅವಿರೋಧ ಆಯ್ಕೆಯಾಗಿದ್ದು, ಕಾರ್ಯಕಾರಿ ಮಂಡಳಿಗೆ ಡಿ.ಜಯಣ್ಣ, ಮಲ್ಲಿಕಾರ್ಜುನ ಬಿ.ಬಳೆ, ಹೆಚ್.ಸ್ವಾಮಿಗೌಡ, ಸಿ.ಎ.ಕೋಮಲೇಗೌಡ, ಕೆ.ರವಿಪ್ರಕಾಶ್, ಕನಕ ಅರಸು, ಬಿ.ರವೀಂದ್ರ ಇವರುಗಳನ್ನು ಆಯ್ಕೆ ಮಾಡಲಾಗಿದೆ, ಚುನಾವಣಾಧಿಕಾರಿಯಾಗಿ ಎನ್.ಎಸ್.ಪಂಕಜ ಕರ್ತವ್ಯ ನಿರ್ವಹಿಸಿದರು ಎಂದು ಕಾರ್ಯದರ್ಶಿ ಎ.ವಿ.ಶಿವರಾಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

 

Leave a Reply

comments

Related Articles

error: