ಕ್ರೀಡೆದೇಶ

ವಿಮಾನ ನಿಲ್ದಾಣದಲ್ಲೇ ಸರಳ ನಿಶ್ಚಿತಾರ್ಥ ಮಾಡಿಕೊಂಡ ಚಿನ್ನದ ಹುಡುಗಿ!

ನವದೆಹಲಿ (ಆ.28): ಏಷ್ಯನ್ ಗೇಮ್ಸ್ ಕುಸ್ತಿ ಅಖಾಡದಲ್ಲಿ ಚಿನ್ನ ಗೆದ್ದು ದೇಶಕ್ಕೆ ಹೆಮ್ಮೆ ತಂದ ವಿನೇಶ್ ಪೋಗತ್, ತವರು ನೆಲ ಭಾರತಕ್ಕೆ ಬಂದಿಳಿದ ತಕ್ಷಣವೇ ವಿಮಾನ ನಿಲ್ದಾಣದಲ್ಲೇ ನಿಶ್ಚಿತಾರ್ಥ ಮಾಡಿಕೊಂಡು ಎಲ್ಲರಿಗೂ ಮತ್ತೊಂದು ಅಚ್ಚರಿ ನೀಡಿದ್ದಾರೆ.

ರಿಯಲ್ ದಂಗರ್ ಹುಡುಗಿಯಂತೆ ಚಿನ್ನ ಗೆದ್ದ ವಿನೇಶ್ ಪೋಗತ್, 24ನೇ ವರ್ಷದ ಹುಟ್ಟುಹಬ್ಬವನ್ನು ಚಿನ್ನ ಗೆಲ್ಲುವ ಮೂಲಕ ಸೆಲೆಬ್ರೇಟ್ ಮಾಡಿದ್ದಾರೆ. ಮಾತ್ರವಲ್ಲ ಈಗ ಬಾಳ ಸಂಗಾತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡೋದಕ್ಕೆ ಮುಂದಾಗಿದ್ದಾರೆ.

ಈ ಗೋಲ್ಡರ್ನ್ ಗರ್ಲ್ ತಮ್ಮ ದೀರ್ಘ ಕಾಲದ ಗೆಳೆಯ ಮತ್ತು ಕುಸ್ತಿ ಪಟು ಸೋಮ್ ವೀರ್ ರಾಟಿಯವರೊಂದಿಗೆ ಏರ್ಪೋರ್ಟ್ನಲ್ಲೇ ಎಂಗೇಜ್ ಆಗಿಬಿಟ್ಟಿದ್ದಾರೆ! ಹೌದು. ಜಕಾರ್ತಾದಿಂದ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದ ಹಾಗೆ ವಿನೇಶ್ ಪೋಗತ್ ಮತ್ತು ಸೋಮ್ ವೀರ್ ನಿಶ್ಚಿತಾರ್ಥದ ಉಂಗುರ ಬದಲಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ವಿಮಾನ ನಿಲ್ದಾಣದಲ್ಲೇ ಕೇಕು ಕತ್ತರಿಸಿ ಈ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಈ ಸಮಯದಲ್ಲಿ ವಿನೇಶ್ ಪೋಗತ್ ಮತ್ತು ಸೋಮ್ ವೀರ್ ಕುಟುಂಬ ಮತ್ತು ಸ್ನೇಹಿತರ ಬಳಗ ಹಾಜರಿತ್ತು.

ಈ ಹಿಂದೆ ವಿನೇಶ್ ಪೋಗತ್ ಹೆಸರು ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ ಜೊತೆ ಥಳುಕು ಹಾಕಿಕೊಂಡಿತ್ತು. ಮಾಧ್ಯಮಗಳಲ್ಲಿ ಕೂಡ ಈ ವಿಚಾರ ಸಾಕಷ್ಟು ಸುದ್ದಿಯಾಗಿತ್ತು. ಸರ್ಪ್ರೈಸ್ ಎಂಗೇಜ್ಮೆಂಟ್ ಪಾರ್ಟಿ ಆ ವಿವಾದವನ್ನು ಮರೆಸುವ ಪ್ರಯತ್ನ ಅಲ್ಲ ಅನ್ನೋದನ್ನು ವಿನೇಶ್ ಪೋಗತ್ ಹೇಳಿದ್ದಾರೆ. ಸೋಮ್ ವೀರ್ ಮತ್ತು ನನ್ನ ನಡುವಿನ ಗೆಳೆತನದ ಬಗ್ಗೆ 7-8 ವರ್ಷಗಳಿಂದ ಇಡೀ ಭಾರತಕ್ಕೆ ಗೊತ್ತಿತ್ತು ಎಂದಿದ್ದಾರೆ ರಿಯಲ್ ದಂಗಲ್ ಹುಡುಗಿ. ಒಟ್ಟಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡ್ತಿರೋ ಚಿನ್ನದ ಹುಡುಗಿಗೆ ಶುಭವಾಗಲಿ ಎಂದು ಹಾರೈಸೋಣ. (ಎನ್.ಬಿ)

Leave a Reply

comments

Related Articles

error: