ಮೈಸೂರು

ಪ್ರಸಾದ್ ಸ್ಕೂಲ್ ಆಫ್ ರಿದಮ್ಸ್ : ದಶಮಾನೋತ್ಸವ ‘ಡಿ.25’

ಪ್ರಸಾದ್ ಸ್ಕೂಲ್ ಆಫ್ ರಿದಮ್ಸ್ ತಾಳವಾದ್ಯ ಪ್ರತಿಷ್ಠಾನದ ದಶಮಾನೋತ್ಸವ ಸಂಭ್ರಮಾಚರಣೆಯನ್ನು  ಡಿ.25ರ ಭಾನುವಾರ ಸಂಜೆ 4ಗಂಟೆ, ಶಾರದ ವಿಲಾಸ ಕಾಲೇಜಿನ ಶತಮಾನೋತ್ಸವ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಶಾಲೆಯ ಸಂಸ್ಥಾಪಕ ರಾಘವೇಂದ್ರ ಪ್ರಸಾದ್ ತಿಳಿಸಿದರು.

ಅವರು,ಗುರುವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಂಜೆ 5:30ಕ್ಕೆ ಇಸ್ಕಾನ್ ದೇವಾಲಯದ ಉಪಾಧ್ಯಕ್ಷ ರಸಿಕಶೇಖರ ದಾಸಪ್ರಭೂಜಿ ಉದ್ಘಾಟಿಸುವರು, ಬಿಜೆಪಿ ನಗರಾಧ್ಯಕ್ಷ ಹೆಚ್.ವಿ.ರಾಜೀವ್ ಅಧ್ಯಕ್ಷತೆ ಹಾಗೂ ಮೇಲುಕೋಟೆ ವೆಂಗೀಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ ಸಾನಿಧ್ಯ ವಹಿಸುವರು ಎಂದರು.

ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ರಘುರಾಂ ವಾಜಪೇಯಿ, ಬ್ರಾಹ್ಮಣ ಸಭಾ ಜಿಲ್ಲಾಧ್ಯಕ್ಷ ಡಿ.ಟಿ.ಪ್ರಕಾಶ್, ಮಹಾನಗರ ಪಾಲಿಕೆ ಸದಸ್ಯರಾದ  ಮಾ.ವಿ.ರಾಮಪ್ರಸಾದ್, ಸುನಿಲ್ ಕುಮಾರ್ ಎನ್. ಹಾಗೂ ಇತರರು ಉಪಸ್ಥಿತರಿರುವರು.

ಸಾಧಕರಿಗೆ ಸನ್ಮಾನ : ದಶಮಾನೋತ್ಸವ ಸಂಭ್ರಮಾಚರಣೆ ಪ್ರಯುಕ್ತ ಹಿರಿಯ ಕಲಾವಿದರಾದ ಬಾಬು ಸ್ಕೂಲ್ ಆಫ್ ರಿದಮ್ಸ್  ಸಂಸ್ಥಾಪಕ ಬಾಬಣ್ಣ (ಸುಕುಮಾರ್), ಮೃದಂಗ ಹಾಗೂ ಡ್ರಮ್ಸ್ ವಾದಕ ಡಾ.ಸಿ.ಆರ್.ಗೋಪಾಲಕೃಷ್ಣ, (ಯುಎಸ್‍ಎ) ಡೇವಿಲ್ ಆನ್ ಡ್ರಮ್ಸ್ ಪ್ರಶಸ್ತಿ ವಿಜೇತ ದೇವರ, ಆಕಾಶವಾಣಿ-ದೂರದರ್ಶನ ಕಲಾವಿದ ವಿದ್ವಾನ್ ಕೃಷ್ಣಮೂರ್ತಿ, ಗಿಟಾರ್ ವಾದಕ ಚಾರ್ಲ್ಸ್ ಪ್ರೇಮಾನಂದ, ತಬಲ ವಾದಕ ಈಶ್ವರ್, ಮ್ಯಾಂಡಲೀನ್ ವಾದಕ ವಿದ್ವಾನ್ ಎ.ವಿ.ಆನಂದ್, ರಂಗಭೂಮಿ ಕಲಾವಿದ ರಾಜೇಂದ್ರಕುಮಾರ್, ಗಾಯಕ ಹಾಗೂ ನಿರೂಪಕ ಸದಾಶಿವಶೆಣೈ ಹಾಗೂ ವಾಯ್ಸ್ ಆಫ್ ಮೈಸೂರಿನ ಪ್ರಚಾರಕ ಎನ್.ಚಂದ್ರಶೇಖರ್ (ಮೈಕ್‍ಚಂದ್ರು) ಇವರುಗಳನ್ನು ಸನ್ಮಾನಿಸಲಾಗುವುದು.

ಸಂಜೆ ಸಂಸ್ಥೆಯ ವಿದ್ಯಾರ್ಥಿಗಳಿಂದ ಹಿಂದಿ,ಕನ್ನಡ,ತಮಿಳು ಹಳೆಯ ಚಿತ್ರಗೀತೆಗಳ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಡಾ.ಎಂ.ಪಿ.ವರ್ಷ, ಮೈಕ್ ಚಂದ್ರಶೇಖರ್, ಸ್ಪಿರಿಟ್ ಇವೆಂಟ್ಸ್‍ ಸಂಸ್ಥಾಪಕ ಅಜೇಯ್ ಶಾಸ್ತ್ರಿ ಹಾಗೂ ಕೆ.ಎ.ಪಿ.ಕೆ ಟ್ರಸ್ಟ್‍ ಅಧ್ಯಕ್ಷ ವಿಕ್ರಮ್ ಉಪಸ್ಥಿತರಿದ್ದರು.

Leave a Reply

comments

Related Articles

error: