ಮೈಸೂರು

ನಾಳೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ

ಮೈಸೂರು,ಆ.28 : ಸಿ.ಎಸ್.ಐ ಆರ್, ಸಿಎಫ್ ಟಿಆರ್ ಐ ನ ಎಸ್.ಸಿ, ಎಸ್ ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಜಂಟಿಯಾಗಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 127ನೇ ಜಯಂತಿಯನ್ನು ಆ.29ರ ಮಧ್ಯಾಹ್ನ 2.45ಕ್ಕೆ ಕೇಂದ್ರದ ಐಎಫ್ ಟಿಟಿಸಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಸಂಸದ ಆರ್.ದ್ರುವನಾರಾಯಣ ಉದ್ಘಾಟಿಸುವರು, ಸಿಎಸ್ಐಆರ್ -ಸಿಎಫ್ ಟಿ ಆರ್ ಐ ನಿರ್ದೇಶಕ ಜಿತೇಂದ್ರ ಜೆ.ಜಾಧವ್ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಜಾಪ್ರಭುತ್ವ ಮತ್ತು ನಾಗರೀಕ ಸಮಾಜ ವಿಷಯವಾಗಿ ಪ್ರೊ.ಕೆ.ಎಸ್. ಭಗವಾನ್, ಭಾರತೀಯ ಸಂವಿಧಾನ ಪ್ರಸ್ತುತತೆ ಬಗ್ಗೆ ಪ್ರೊ.ಬಿ.ಪಿ.ಮಹೇಶ್ಚಂದ್ರ ಗುರು ಗಳು ಉಪನ್ಯಾಸ ನೀಡುವರು.

ಮೈಸೂರು ವಿವಿಯ ಕುಲಸಚಿವ ಪ್ರೊ.ಆರ್.ರಾಜಣ್ಣ, ದಲಿತ ವೆಲ್ ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು,ಅಧ್ಯಕ್ಷ ಜಾಕೀರ್ ಹುಸೇನ್ ಇವರುಗಳು ಹಾಜರಿರುವರು ಎಂದು ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: