ಮೈಸೂರುಸುದ್ದಿ ಸಂಕ್ಷಿಪ್ತ

ಮೈಸೂರು ವಿವಿಯ ಶತಮಾನೋತ್ಸವ ಆಚರಣೆ ‘ಡಿ.23’

ಮೈಸೂರು ವಿವಿಯ ಶತಮಾನೋತ್ಸವದಂಗವಾಗಿ ಶತಮಾನೋತ್ಸವ ನಾಣ್ಯಗಳು, ಇತಿಹಾಸ ಸಾರುವ ಸಚಿತ್ರ ಪುಸ್ತಕ (coffee table book), ಉಪನ್ಯಾಸಗಳ ಸಂಕಲನ ಹಾಗೂ ಕರ್ನಾಟಕ ವಿಶ್ವಕೋಶ ಸಂಪುಟ-1ರ ಇಂಗ್ಲೀಷ್ ಅನುವಾದ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಡಿ.23ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಕ್ರಾಫರ್ಡ್ ಭವನದಲ್ಲಿ ಆಯೋಜಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುಸ್ತಕ ಬಿಡುಗಡೆಗೊಳಿಸುವರು. ವಿದ್ವಾಂಸ ಪ್ರೊ.ಹಂ.ಪ.ನಾಗರಾಜಯ್ಯ ಪುಸ್ತಕ ಪರಿಚಯ ನೀಡುವರು.

ವಿಶೇಷ ಗೌರವಾನ್ವಿತ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ತನ್ವೀರ್ ಸೇಠ್, ಶಾಸಕ ಪಿ.ವಾಸು ಉಪಸ್ಥಿತರಿರುವರು. ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಅಧ್ಯಕ್ಷತೆ ವಹಿಸುವರು.

Leave a Reply

comments

Related Articles

error: