ಸುದ್ದಿ ಸಂಕ್ಷಿಪ್ತ

ಜೆಎಸ್ಎಸ್ ಪ್ರತಿಭಾ ಪುರಸ್ಕಾರ : ಅರ್ಜಿ ಆಹ್ವಾನ

ಮೈಸೂರು,ಆ.28 : ಜೆಎಸ್ಎಸ್ ಮಹಾವಿದ್ಯಾಪೀಠದ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ ಜಗದ್ಗುರು ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 103ನೇ ಜಯಂತಿ ಮಹೋತ್ಸವದ ಅಂಗವಾಗಿ ಪ್ರತಿಭಾ ಪುರಸ್ಕಾರವನ್ನು ಆಯೋಜಿಸಲಾಗಿದೆ.

ಎಸ್.ಎಸ್.ಎಲ್.ಸಿ, ಪಿಯುಸಿ, ಕೆ.ಎ.ಎಸ್ ಹಾಗೂ ಐ ಎಎಸ್ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿಯನ್ನು ಕಾರ್ಯದರ್ಶಿ, ಜೆಎಸ್ಎಸ್ ಮಹಾವಿದ್ಯಾಪೀಠದ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ, ಜೆಎಸ್ಎಸ್ ನಗರ, ಮೈಸೂರು-29, ಇಲ್ಲಿಗೆ ಸೆ.15ರೊಳಗೆ ಕಳುಹಿಸಬಹುದಾಗಿದೆ. ವಿವರಗಳಿಗೆ ದೂ.ಸಂ. 0821 2470798 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: