ಪ್ರಮುಖ ಸುದ್ದಿ

ಆಸ್ತಿ ವಿಚಾರಕ್ಕೆ ತಂದೆಯ ಕಣ್ಣನ್ನೇ ಕಿತ್ತ ಮಗನ ಬಂಧನ

ರಾಜ್ಯ(ಬೆಂಗಳೂರು)ಆ.29:- ಆಸ್ತಿ ವಿಚಾರಕ್ಕೆ ಜಗಳವಾಡಿ ಪುತ್ರನೊಬ್ಬ ಜನ್ಮಕೊಟ್ಟ ತಂದೆಯ ಕಣ್ಣನ್ನೇ ಕಿತ್ತು ಹಾಕಿರುವ ಹೃದಯ ವಿದ್ರಾವಕ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಜೆಪಿ ನಗರದ ಶಾಕಂಬರಿ ನಗರದಲ್ಲಿ ಈ ಘಟನೆ ನಡೆದಿದ್ದು, ಚೇತನ್ ಎಂಬಾತನೇ ತನ್ನ 65 ವರ್ಷದ ತಂದೆ  ಪರಮೇಶ್ ಎಂಬವರ ಕಣ್ಣನ್ನು ಕಿತ್ತು ಹಾಕಿದ್ದಾನೆ. ಪುತ್ರನ ಈ ಕೃತ್ಯದಿಂದ ಗಾಯಗೊಂಡಿರುವ ತಂದೆ ಪರಮೇಶ್ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ತಿಂಗಳಷ್ಟೆ ಪರಮೇಶ್ ಪತ್ನಿ ತೀರಿಕೊಂಡಿದ್ದಾರೆ. ಪತ್ನಿ ನಿಧನದ ಬಳಿಕ ಮಗ ಮತ್ತು ಅಪ್ಪನ ನಡುವೆ ಆಸ್ತಿ ವಿವಾದ ತಾರಕಕ್ಕೇರಿದೆ. ಈ ನಡುವೆ ನಿನ್ನೆ ಏಕಾಏಕಿ ಮನೆಗೆ ನುಗ್ಗಿದ ಪುತ್ರ ಚೇತನ್ ತನ್ನ ತಂದೆಯ ಕಣ್ಣನ್ನು ಕಿತ್ತು ಹಾಕಿ ಕ್ರೌರ್ಯ ಮೆರೆದಿದ್ದಾನೆ. ಈ ಕುರಿತು ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಚೇತನ್ ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚೇತನ್ ಗೆ ಹುಡುಗಿಯರ ಶೋಕಿ ಇತ್ತು. ಗಾಂಜಾ ನಶೆಯಲ್ಲಿ ತೇಲುತ್ತಿದ್ದ. ಜತೆಗೆ ಅಪ್ಪನ ಹಣದಲ್ಲಿ ಶೋಕಿ ಮಾಡುತ್ತಿದ್ದ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: