ಸುದ್ದಿ ಸಂಕ್ಷಿಪ್ತ

ರಾಷ್ಟ್ರಮಟ್ಟದ ಯೋಗ ಛಾಂಪಿಯನ್‍ ಐಶ್ವರ್ಯ ರಾವ್

20161222_185351ಸ್ವಾಮಿ ವಿವೇಕಾನಂದ ಕನ್ನಡ ಯುವ ಯೋಗ ಬಳಗವು ಮೈಸೂರು ಯೋಗ ಒಕ್ಕೂಟ ಮತ್ತು ಎಂ.ಡಿ.ಸಿ.ಡಿ.ಎ ಮಂಡ್ಯ – ಇವರ ಸಹಯೋಗದೊಂದಿಗೆ ಡಿಸೆಂಬರ್ 17 ಮತ್ತು 18 ರಂದು ಮಂಡ್ಯದಲ್ಲಿ ನಡೆದ ರಾಷ್ಟ್ರಮಟ್ಟದ ಅಂತರ ಕಾಲೇಜು ಮತ್ತು ಮುಕ್ತ ಯೋಗಾಸನ ಛಾಂಪಿಯನ್‍ಶಿಪ್‍ ಎರಡೂ ವಿಭಾಗಗಳ ಸ್ಪರ್ಧೆಯಲ್ಲಿ ಮೈಸೂರಿನ ಐಶ್ವರ್ಯ ರಾವ್ ಅವರು ಪ್ರಥಮ ಬಹುಮಾನ ಗೆದ್ದುಕೊಂಡು ರಾಷ್ಟ್ರೀಯ ಯೋಗ ಛಾಂಪಿಯನ್‍ಶಿಪ್‍ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬಹುಮುಖ ಪ್ರತಿಭೆಯ ಐಶ್ವರ್ಯ ರಾವ್, ಕುವೆಂಪುನಗರದ ಬ್ರಹ್ಮಶ್ರೀ ನಾರಾಯಣ ಗುರು ಯೋಗಮಂದಿರ ಟ್ರಸ್ಟ್`ನ ಯೋಗಾಚಾರ್ಯ ಶ್ರೀ ಬಿ.ಶಾಂತಾರಂ ಅವರ ವಿದ್ಯಾರ್ಥಿಯಾಗಿದ್ದಾರೆ. ಅತಿ ಕಡಿಮೆ ಅವಧಿಯ ತರಬೇತಿಯಲ್ಲಿ ಅದ್ಭುತ ಸಾಧನೆ ತೋರಿದ ಐಶ್ವರ್ಯ ರಾವ್ ಅವರ ಪ್ರತಿಭೆಯ ಬಗ್ಗೆ ಯೋಗಾಚಾರ್ಯ ಶ್ರೀ ಬಿ. ಶಾಂತಾರಾಂ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯೋಗವಷ್ಟೇ ಅಲ್ಲದೆ ಆಧುನಿಕ ಶೈಲಿಯ ನೃತ್ಯಪ್ರಕಾರಗಳನ್ನೂ ಕರಗತಗೊಳಿಸಿಕೊಂಡಿರುವ ಇವರು, ಈಗಾಗಲೇ ಸ್ಯಾಂಡಲ್‍ವುಡ್‍ಗೆ ಕೂಡಾ ಕಾಲಿಟ್ಟಿದ್ದಾರೆ. ಇವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ ಕನ್ನಡ ಚಲನಚಿತ್ರ ಸದ್ಯದಲ್ಲೇ ತೆರೆಗೆ ಬರಲು ತಯಾರಾಗಿದೆ ಹಾಗೂ ಇನ್ನೆರಡು ಚಿತ್ರಗಳ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.

ಯೋಗದಿಂದ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಆರೋಗ್ಯವಂತ ಜೀವನ ನಡೆಸಬಹುದೆಂಬ ಬಗ್ಗೆ ಜನಜಾಗೃತಿ ಮೂಡಿಸಬೆಕು. ಸಾಮಾಜಿಕ ಕಳಕಳಿಯ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಇವರು, ಯೋಗ ಶಿಕ್ಷಕ ತರಬೇತಿ ಪಡೆಯುತ್ತಿದ್ದಾರೆ. “ಅಷ್ಟಾಂಗ ವಿನ್ಯಾಸ”ವನ್ನೂ ಕೂಡ ಅಭ್ಯಾಸ ಮಾಡುತ್ತಿದ್ದಾರೆ. ಬೇರೆ ಬೇರೆ ಯೋಗಾಸನ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿರುವ ಐಶ್ವರ್ಯರಾವ್, ಪ್ರಸ್ತುತ ಮೈಸೂರಿನ ಕುವೆಂಪುನಗರದಲ್ಲಿ ತಂದೆ ಬಿ. ನಾರಾಯಣರಾವ್, ತಾಯಿ ಸುಜಾತಾ ಜೊತೆಯಲ್ಲಿ ನೆಲೆಸಿದ್ದಾರೆ.

Leave a Reply

comments

Related Articles

error: