ಮೈಸೂರು

ಪಾಲಿಕೆಯ ಚುನಾವಣೆ: ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ 7ಮಂದಿ ಪಕ್ಷದಿಂದಲೇ ಉಚ್ಛಾಟನೆ

ಮೈಸೂರು,ಆ.29:- ಮೈಸೂರು ಮಹಾನಗರಪಾಲಿಕೆಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪಕ್ಷದ ಹಿರಿಯರ ಆದೇಶ  ಹಾಗೂ ಸೂಚನೆಗೆ ಅಗೌರವ ಸೂಚಿಸಿರುವ ಹಿನ್ನೆಲೆಯಲ್ಲಿ ಪಕ್ಷದ ಹಿರಿಯರು ಸಮಾಲೋಚಿಸಿ ಬಂಡಾಯವೆದ್ದ ಅಭ್ಯರ್ಥಿಗಳನ್ನು ಪಕ್ಷದಿಂದ ಉಚ್ಛಾಟಿಸಿದ್ದಾರೆ.

ಮಾ.ವಿ. ರಾಂ ಪ್ರಸಾದ್, 55ನೇ ವಾರ್ಡ್ ಚಾಮುಂಡಿಪುರಂ, ಬಾಲಚಂದ್ರ ಶಾಸ್ತ್ರಿ 51ನೇ ವಾರ್ಡ್ ಅಗ್ರಹಾರ, ಉಮಾಸುರೇಶ್ 48ನೇ ವಾರ್ಡ್ ಜಯನಗರ, ಗೀತಾ ನಾಗರಾಜ್ 54ನೇ ವಾರ್ಡ್ ಗುಂಡುರಾವ್ ನಗರ, ಎಲ್ ನಿಂಗರಾಜು 7ನೇ ವಾರ್ಡ್ ಮೇಟಗಳ್ಳಿ,ಲಿತಾ ಮಾದೇಶ್ 19ನೇ ವಾರ್ಡ್ ಜಯಲಕ್ಷ್ಮಿಪುರಂ, ಬಾಲಸುಬ್ರಹ್ಮಣ್ಯಂ(ಸ್ನೇಕ್ ಶ್ಯಾಂ)6ನೇ ವಾರ್ಡ್ ಗೋಕುಲಂ ಇವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಹೆಚ್.ಮಂಜುನಾಥ್ ಅಧಿಕೃತವಾಗಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: