ಕರ್ನಾಟಕ

ಅತಿಥಿ ಬೋಧಕರ ಹುದ್ದೆಗೆ ಅರ್ಜಿ ಆಹ್ವಾನ

ಮಂಡ್ಯ (ಆ.29): ಮಂಡ್ಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿದ್ಯುತ್‍ಕರ್ಮಿ, ಫಿಟ್ಟರ್ ವೃತ್ತಿಗಳಿಗೆ ಸಂಬಂಧಪಟ್ಟಂತೆ ಬೋಧಕರ ಹುದ್ದೆಗೆ ಅನುಭವವುಳ್ಳ, ನುರಿತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಬೋಧನೆಯಲ್ಲಿ ಆಸಕ್ತಿ ಇರುವವರು ವಿದ್ಯುತ್, ಯಾಂತ್ರಿಕ, ಆಟೋಮೊಬೈಲ್‍ನಲ್ಲಿ ಬಿ.ಇ, ಅಥವಾ ಡಿಪ್ಲೊಮ ಪದವೀಧರರಾಗಿರಬೇಕು. ಅರ್ಜಿ ಸಲ್ಲಿಸುವವರು ಸ್ವವಿವರಗಳ ಜೊತೆ ವಿದ್ಯಾರ್ಹತೆ ದಾಖಲಾತಿಗಳ ಪ್ರತಿಗಳನ್ನು ಸಲ್ಲಿಸಬೇಕು. ಅರ್ಹ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗೆ ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಮಂಡ್ಯ ಇವರನ್ನು ಸಂಪರ್ಕಿಸಬಹುದು. (ಎನ್.ಬಿ)

Leave a Reply

comments

Related Articles

error: