ಕರ್ನಾಟಕ

ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಮಂಡ್ಯ (ಆ.29): 2018-19ನೇ ಸಾಲಿನ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿ., ವತಿಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಮತ್ತು ವಿಶೇಷ ಘಟಕ ಯೋಜನೆ ಮತ್ತು ಗಿರಿಜನಉಪಯೋಜನೆಯಡಿಯಲ್ಲಿ ಕುರಿ/ಮೇಕೆ ಘಟಕಗಳ ಅನುಷ್ಟಾನಕ್ಕಾಗಿ ಮಂಡ್ಯ, ಜಿಲ್ಲೆಯ ನಿಗಮದಲ್ಲಿ ನೊಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವ, ಇಲಾಖೆ/ನಿಗಮದಿಂದ ಮೂರು ವರ್ಷಗಳಲ್ಲಿ ಯಾವುದೇ ಸಹಾಯಧನ ಸೌಲಭ್ಯ ಪಡೆಯದೆ ಇರುವ, ಬಿ.ಪಿ.ಎಲ್ ಆಹಾರ ಪಡಿತರ ಚೀಟಿಯನ್ನು ಹೊಂದಿರುವ, ಕುರಿ/ಮೇಕೆ ಸಾಕಾಣಿಕೆಯಲ್ಲಿ ತರಬೇತಿ ಪಡೆದಿರುವ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದವರ ಸದಸ್ಯರುಗಳಿಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಫಲಾನುವಿಭಗಳು ಸದಸ್ಯತ್ವ ಹೊಂದಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಮೂಲಕ ಸಹಾಯಕ ನಿರ್ದೇಶಕರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿ., ಮಂಡ್ಯ ಇವರಿಗೆ ಸೆ.30 ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿ., ಮಂಡ್ಯ ಇವರ ಕಛೇರಿ ದೂರವಾಣಿ ಸಂಖ್ಯೆ: 08232-221590 ಅನ್ನು ಸಂಪರ್ಕಿಸಬಹುದಾಗಿದೆ. (ಎನ್.ಬಿ)

Leave a Reply

comments

Related Articles

error: