ಸುದ್ದಿ ಸಂಕ್ಷಿಪ್ತ

ಕಲಾವಿದ ಮಂಜುನಾಥ ಬಿಳೆಕೆರೆಗೆ ಶ್ರದ್ದಾಂಜಲಿ

ಅನಾರೋಗ್ಯದಿಂದ ಸೋಮವಾರ ನಿಧನರಾದ ರಂಗಾಯಣ ಕಲಾವಿದ ಮಂಜುನಾಥ ಬಿಳೆಕೆರೆ ಅವರಿಗೆ ಭಾರತೀಯ ಜನಕಲಾ ಸಮಿತಿ (ಇಂಡಿಯನ್‍ ಪೀಪಲ್ ಥಿಯೇಟರ್ ಅಸೊಸಿಯೇಷನ್‍ – ಐಪಿಟಿಎ) ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಹೆಗ್ಗೋಡಿನ ನೀನಾಸಂನಲ್ಲಿ ಕೆ.ವಿ. ಸುಬ್ಬಣ್ಣ ಅವರ ಗರಡಿಯಲ್ಲಿ ಡಿಪ್ಲೊಮಾ ಶಿಕ್ಷಣ ಪಡೆದಿದ್ದ ಅವರು, ನಂತರ ಸ್ನಾತಕೋತ್ತರ ಪದವಿ ಪಡೆದರು. ರಂಗಾಯಣಕ್ಕೆ ಸೇರುವ ಮುನ್ನ ಸಮುದಾಯ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು.

ಇಂಡಿಯನ್ ಪೀಪಲ್ ಥಿಯೇಟರ್ ಅಸೋಸಿಯೇಷನ್‍ (ಐಪಿಟಿಎ) ವತಿಯಿಂದ ಮಂಜುನಾಥ ಬಿಳೆಕೆರೆ ಅವರ ಸಹಕಾರ ಪಡೆದು ಜನ್ಯ ಅವರ ನಿರ್ದೇಶನದಲ್ಲಿ ಮೈಸೂರಿನ ಕಲಾಮಂದಿರದಲ್ಲಿ ನಡೆಸಿದ ಶರೀಫ ನಾಟಕವು ಅತ್ಯುತ್ನತ ಬಹುಮಾನ ಪಡೆದಿತ್ತು. ನಾಟಕದ ಯಶಸ್ಸಿನಲ್ಲಿ ಮಂಜುನಾಥ ಬಿಳಿಕೆರೆ ಅವರ ಸಹಕಾರ, ಕಲಾವಿದರಿಗೆ ನೀಡಿದ ಮಾರ್ಗದರ್ಶನವನ್ನು ಮರೆಯಲು ಸಾಧ್ಯವಿಲ್ಲ. ಅವರ ನಿಧನದಿಂದ ರಂಗಭೂಮಿ ಕ್ಷೇತ್ರ ಒಬ್ಬ ಅತ್ಯುತ್ತಮ ಸ್ನೇಹಜೀವಿಯನ್ನು ಕಳೆದುಕೊಂಡಂತಾಗಿದೆ ಎಂದು ಮಂಜುನಾಥ್ ಅವರ ಸೇವೆಯನ್ನು ಸ್ಮರಿಸುವ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.

Leave a Reply

comments

Related Articles

error: