ಪ್ರಮುಖ ಸುದ್ದಿಮೈಸೂರು

ಆಧುನಿಕ ಶ್ರವಣಕುಮಾರ : ಬೈಕ್ ನಲ್ಲಿ ಸಂಚಾರ

ಮೈಸೂರು,ಆ.29:- ಪುರಾಣಗಳಲ್ಲಿ ಶ್ರವಣ ಕುಮಾರನ ಕಥೆಯನ್ನು ನಾವೆಲ್ಲ ಕೇಳಿದ್ದೇವೆ. ತಂದೆ-ತಾಯಿಗಳ ಆಸೆ ಈಡೇರಿಸಲು ಉತ್ತರ ಭಾರತದ ಸಹೋದರರಿಬ್ಬರು ಹೆಗಲಮೇಲೆ ಹೊತ್ತು ಹರಿದ್ವಾರಕ್ಕೆ ಹೋಗಿ ಬಂದಿದ್ದು ಇತ್ತೀಚೆಗಷ್ಟೇ ಸುದ್ದಿಯಾಗಿತ್ತು.  ಇದರ ಬೆನ್ನಲ್ಲೇ ಇಲ್ಲೊಬ್ಬ ವ್ಯಕ್ತಿ ತನ್ನ ತಾಯಿ ಆಸೆ ಈಡೇರಿಸಲು ಬೈಕ್ ನಲ್ಲಿಯೇ ದೇಶದಲ್ಲಿನ ತೀರ್ಥಕ್ಷೇತ್ರಗಳ ದರ್ಶನ ಪಡೆದು ವಾಪಸ್ ಆಗಿದ್ದಾರೆ.

ಬೈಕಲ್ಲಿ ತೀರ್ಥಯಾತ್ರೆಯೇ ಎಂಬ ಅಚ್ಚರಿ ಮೂಡಿದರೂ ಇದು ಸತ್ಯ.  ಕೃಷ್ಣಕುಮಾರ ಎಂಬ ಈ ಆಧುನಿಕ ಶ್ರವಣಕುಮಾರ, ತಾಯಿ ಚೂಡಾರತ್ನರ ಆಸೆಯಂತೆ ಅವರನ್ನು ಬೈಕಲ್ಲಿ ಕೂರಿಸಿಕೊಂಡು ದೇವಾಲಯಗಳ ದರ್ಶನ ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ.  ಮೂಲತಃ ಮೈಸೂರಿನ ಜಿಲ್ಲೆಯವರಾಗಿರುವ ಕೃಷ್ಣಕುಮಾರ್ ತಾಯಿ ಬೇಲೂರು ಹಳೇಬೀಡು ನೋಡಲು ಆಗಲಿಲ್ಲ ಎಂದು ಮಗನ ಮುಂದೆ ಹೇಳಿದ್ದರಂತೆ. ಅದಕ್ಕೆ ಮನನೊಂದ ಕೃಷ್ಣ ಕುಮಾರ್ ತನ್ನ ತಾಯಿಗೆ ಬೈಕ್ ನಲ್ಲೇ ಪರ್ಯಟನೆ ಮಾಡಿಸಿದ್ದಾರೆ. ಪರ್ಯಟನೆಗೆ ಅವರಿಗೆ ನೆರವಾದದ್ದು ಕೃಷ್ಣಕುಮಾರ್ ಅವರ ತಂದೆ ಬಳಸುತ್ತಿದ್ದ ಬಜಾಜ್ ಚೇತಕ್ ಬೈಕ್. ತಂದೆ ಬಳಿಕ ಅವರ ನೆನಪಿಗಾಗಿ ಆ ಬೈಕ್ ನ್ನು ಕೃಷ್ಣಕುಮಾರ್ ಇಟ್ಟುಕೊಂಡಿದ್ದರು, ಅದೇ ಬೈಕಿನಲ್ಲಿ ತಾಯಿ-ಮಗ ದೇಶದಲ್ಲಿನ ದೇವಾಲಯಗಳನ್ನು ಸುತ್ತಿ ಬಂದಿದ್ದಾರೆ. ಜನವರಿ 16 ರಿಂದ ಚೇತಕ ಸ್ಕೂಟರ್ ಮೇಲೆ ಪ್ರಾರಂಭಿಸಿದ ಅವರು ಆಂಧ್ರ, ಕೇರಳ, ತಮಿಳುನಾಡು, ಕರ್ನಾಟಕ ರಾಜ್ಯಗಳಲ್ಲಿರುವ ಪ್ರಮುಖ ದೇಗುಲಗಳ ದರ್ಶನ ಮಾಡಿದ್ದಾರೆ. ಅಲ್ಲದೇ ವನವಾಸಿ ರಾಮ ಮಂದಿರ, ಉತ್ತರಾಧಿ ಮಠ ಹೀಗೆ 23 ಸಾವಿರಕ್ಕೂ ಹೆಚ್ಚು ಕಿ.ಮೀ. ಪ್ರಯಾಣ ಮಾಡಿ ಬಂದಿದ್ದಾರೆ. ಪ್ರಯಾಣಕ್ಕಾಗಿ ಬೇಕಾಗಿರುವ ಅಗತ್ಯ ಸಾಮಗ್ರಿಗಳನ್ನೇ ಬೈಕ್ ಗೆ ಕಟ್ಟಿಕೊಂಡು, ಯಶಸ್ವಿಯಾಗಿ ಯಾತ್ರೆ ಮುಗಿಸಿದ್ದಾರಂತೆ. ಮಗನ ಈ ಕಾರ್ಯಕ್ಕೆ ತಾಯಿ ಚೂಡಾರತ್ನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: