ಪ್ರಮುಖ ಸುದ್ದಿ

ನೇತ್ರದಾನದ ಮೂಲಕ ಕಣ್ಣಿಲ್ಲದವರಿಗೆ ಕಣ್ಣು ನೀಡುವ ಕೆಲಸವಾಗಲಿ : ಡಾ.ಶಾಂತರಾಜ್

ರಾಜ್ಯ(ಮಂಗಳೂರು)ಆ.29:-  ಸಂತ ಆಗ್ನೇಸ್‍ ಕಾಲೇಜು, ಸಮುದಾಯದತ್ತ ಆಗ್ನೇಸ್‍ ಘಟಕವು ಪುತ್ತೂರು ಆನಂದಾಶ್ರಮ ಸೇವಾ ಟ್ರಸ್ಟ್, ಕುತ್ತಾರು ದುರ್ಗಾವಾಹಿನಿ ಮಹಿಳಾ ಮಂಡಲ ಮತ್ತು ನೆರಳು ಟ್ರಸ್ಟ್,ದ.ಕ., ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರಚಿಕಿತ್ಸಾ ಶಿಬಿರವು ಕುತ್ತಾರಿನಲ್ಲಿ ಜರಗಿತು.

ಜಿಲ್ಲಾ ವೆನ್ಲಾಕ್‍ ಆಸ್ಪತ್ರೆಯ ವೈದ್ಯ ಡಾ. ಶಾಂತರಾಜ್ ಶಿಬಿರವನ್ನು ಉದ್ಘಾಟಿಸಿ ಸೇವೆಯ ಮಹತ್ವವನ್ನು ತಿಳಿಸಿದರು. ಪ್ರತಿಯೊಬ್ಬರು ಕಣ್ಣಿನ ಸಂರಕ್ಷಣೆಯ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ತಿಳಿಸಿದರು. ನೇತ್ರದಾನದ ಮೂಲಕ ಕಣ್ಣಿಲ್ಲದವರಿಗೆ ಕಣ್ಣು ಕೊಡುವ ಕೆಲಸ ಮಾಡಬೇಕೆಂದು ಅವರು ಕರೆಕೊಟ್ಟರು.

ಮತ್ತೋರ್ವ ಅತಿಥಿ ಶಿಬಿರದ ನಿರ್ದೇಶಕ ಡಾ. ಮನೋಹರ ರೈ ಮಾತನಾಡಿ“ನಾವು ಆರೋಗ್ಯವಾಗಿದ್ದರೆ ನಮ್ಮ ಪರಿಸರ ಆರೋಗ್ಯವಾಗಿರುತ್ತದೆ, ನಮ್ಮ ಮನಸ್ಸುಆರೋಗ್ಯವಾಗಿರುತ್ತದೆ, ನಮ್ಮ ಚಿಂತನೆಗಳು ಆರೋಗ್ಯವಾಗಿರುತ್ತದೆ. ಯಾವಾಗ ನಮ್ಮ ಚಿಂತನೆಗಳು ಆರೋಗ್ಯವಾಗಿರುತ್ತದೆಯೋ ಆಗ ಮಾತ್ರ ನಾವು ನಮ್ಮ ಸಮಾಜಕ್ಕೆ ಆರೋಗ್ಯಕರವಾದ ವಾತಾವರಣವನ್ನು ನೀಡಬಹುದು”ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಧನಲಕ್ಷ್ಮಿ ಗಟ್ಟಿ ವಹಿಸಿದ್ದರು. ವೈದ್ಯರಾದ ಡಾ. ಪಿ. ಗೌರಿ ಪೈ, ಡಾ. ಸವಿತಾ ಕುಲಕರ್ಣಿ, ಡಾ. ಕೀರ್ತನಾ, ವೆನ್ಲಾಕ್‍ ಆಸ್ಪತ್ರೆ,ಇಂಜಿನಿಯರ್ ನಿತಿನ್, ವಾಸು ಪೂಜಾರಿ, ಸುನಿತಾ, ಎ.ಟಿ.ಸಿ. ಸಂಯೋಜಕಿ ವಿದ್ಯಾ ಸರಸ್ವತಿ ಉಪಸ್ಥಿತರಿದ್ದರು.

ಸುಮಾರು 250 ಫಲಾನುಭವಿಗಳು ಶಿಬಿರದ ಪ್ರಯೋಜನ ಪಡೆದರು. 130 ಜನರಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು ಹಾಗೂ 4ಜನರಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿಉಚಿತ ಶಸ್ತ್ರಚಿಕಿತ್ಸೆಯ ವ್ಯವಸ್ಥೆಯನ್ನು ಮಾಡಿಕೊಡಲಾಯಿತು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: