ದೇಶಮನರಂಜನೆ

ತಮಿಳುನಾಡಿನಲ್ಲಿ ಹೃತಿಕ್‌ ರೋಷನ್ ವಿರುದ್ಧ ವಂಚನೆ ಕೇಸ್‌ ದಾಖಲು

ಚೆನ್ನೈ (ಆ.29): ತಮಿಳುನಾಡು ಮೂಲದ ದಾಸ್ತಾನುಗಾರರೊಬ್ಬರಿಗೆ ವಂಚನೆ ಮಾಡಿದ ಆರೋಪದ ಮೇಲೆ ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಹಾಗೂ ಇತರ 8 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಹರ್ಯಾಣದ ಗುಡಗಾಂವ್‌ ಮೂಲದ ಹೃತೀಕ್‌ ರೋಷನ್‌ ಬ್ರಾಂಡ್‌ನ ಎಚ್‌ಆರ್‌ಎಕ್ಸ್‌ ಉತ್ಪನ್ನಗಳ ಮಾರಾಟ ಸಂಸ್ಥೆಯ ದಾಸ್ತಾನುಗಾರನನ್ನಾಗಿ ತಮ್ಮನ್ನು ನೇಮಿಸಲಾಗಿತ್ತು. ಈ ವ್ಯವಹಾರದಲ್ಲಿ ತಮಗೆ 21 ಲಕ್ಷ ರು. ವಂಚಿಸಲಾಗಿದೆ ಎಂದು ಮುರಳೀಧರನ್‌ ಎಂಬುವರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಎಚ್‌ಆರ್‌ಎಲ್ಸ್‌ ಕಂಪನಿ ತಮಗೆ ಉತ್ಪನ್ನಗಳನ್ನು ಪೂರೈಸಿಲ್ಲ. ಜತೆಗೆ ಸರಕುಗಳ ಮಾರ್ಕೆಂಟಿಂಗ್‌ಗಾಗಿ ಇದ್ದ ತಂಡವನ್ನು ತಮ್ಮ ಗಮನಕ್ಕೆ ತರದೆಯೇ ವಿಸರ್ಜಿಸಲಾಗಿದೆ. ಇದರಿಂದ ವಸ್ತುಗಳು ಮಾರಾಟವಾಗದೇ ಬಾಕಿ ಉಳಿದವು. ಹೀಗಾಗಿ ಮಾರಾಟವಾಗದೇ ಉಳಿದಿದ್ದ ಸರಕುಗಳನ್ನು ವಾಪಸ್‌ ಕಳಿಸಿದೆ. ಆದಾಗ್ಯೂ, ಕಂಪನಿಯು ತನಗೆ ವಾಪಸ್‌ ಹಣ ನೀಡಿಲ್ಲ ಎಂದು ಮುರಳೀಧರನ್‌ ಅವರು ದೂರಿದ್ದಾರೆ.

ಸದ್ಯ ಆನಂದ್‌ ಕುಮಾರ್‌ ಅವರ ಜೀವನಕ್ಕೆ ಸಂಬಂಧಿಸಿದ ಸೂಪರ್‌-30 ಚಿತ್ರೀಕರಣದಲ್ಲಿ ನಟ ಹೃತೀಕ್‌ ಅವರು ಬ್ಯುಸಿಯಾಗಿದ್ದಾರೆ. ಈ ಚಿತ್ರವು ತಮ್ಮ ಸಂಸ್ಥೆ ಕುರಿತು ತಪ್ಪು ಸಂದೇಶ ರವಾನಿಸಿದೆ ಎಂದು ಆರೋಪಿಸಿ, ಪಟನಾ ಮೂಲದ ಗಣಿತ ತಜ್ಞ ಇತ್ತೀಚೆಗಷ್ಟೇ ಹೃತೀಕ್‌ ವಿರುದ್ಧ ದೂರು ನೀಡಿದ್ದರು. (ಎನ್.ಬಿ)

Leave a Reply

comments

Related Articles

error: