ಸುದ್ದಿ ಸಂಕ್ಷಿಪ್ತ
500 ಮತ್ತು 1000 ರೂ. ನೋಟುಗಳ ರದ್ದತಿ ಬಗ್ಗೆ ದುಂಡು ಮೇಜಿನ ಸಭೆ
ಭಾರತ ಕಮ್ಯುನಿಸ್ಟ್ ಪಕ್ಷ (ಮಾಕ್ಸ್ವಾದಿ) ಮೈಸೂರು ಜಿಲ್ಲಾ ಸಮಿತಿ ವತಿಯಿಂದ 500 ಮತ್ತು 1000 ರೂ. ನೋಟುಗಳ ರದ್ದತಿ ಬಗ್ಗೆ ದುಂಡು ಮೇಜಿನ ಸಭೆ ಆಯೋಜಿಸಲಾಗಿದೆ.
ಸಭೆಯನ್ನು ಡಿ. 24 ರಂದು ಸಂಜೆ 4.30ಕ್ಕೆ ಹೋಟೆಲ್ ಗೋವರ್ದನ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ದುಂಡುಮೇಜಿನ ಸಭೆಯ ಮುಕ್ತ ಸಂವಾದದಲ್ಲಿ ಎನ್. ವಿಜಯ್ ಕುಮಾರ್, ಪ. ಮಲ್ಲೇಶ್, ಡಾ. ಅರವಿಂದ ಮಾಲಗತ್ತಿ, ಸಿ.ಪಿ. ಸಿದ್ದಾಶ್ರಮ, ಎಸ್.ಆರ್. ರಮೇಶ್, ಎಚ್.ಆರ್. ಶೇಷಾದ್ರಿ, ಚೌಡಹಳ್ಳಿ ಜವರಾಯ್ಲ, ಬಡಗಲಪುರ ನಾಗೇಂದ್ರ, ಬಿ. ರವಿ, ಹೊಸಕೋಟೆ ಬಸವರಾಜು, ಅಭಿರುಚಿ ಗಣೇಶ್, ಶಂಭುಲಿಂಗಸ್ವಾಮಿ, ಡಾ. ಪದ್ಮ, ಭಾನುಮೋಹನ್, ಕೆ.ಸಿ. ಬಸವರಾಜು, ಡಾ. ಶ್ರೀರಾಮಪ್ಪ, ಲಕ್ಷಣ ಹೊಸಕೋಟೆ, ಕೋದಂಡ ವಿ. ರಾಮು, ಭದ್ರಪ್ಪ, ಮಹದೇವಪ್ಪ, ಲಕ್ಷ್ಮಣ್, ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 94493 22900 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.