ದೇಶಪ್ರಮುಖ ಸುದ್ದಿ

50 ಸಾವಿರ ರೂ ದಂಡ ಪಾವತಿಸಿದ ಮಾರುತಿ ಸುಜುಕಿ!

ನವದೆಹಲಿ (ಆ.29): ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಖರೀದಿಸಿದ್ದ ಗ್ರಾಹಕರೊಬ್ಬರು ಡೀಲರ್ಸ್ ಮಾಡಿದ ಮೋಸದ ವ್ಯಾಪರದಿಂದ ತನಗಾದ ಅನ್ಯಾಯವನ್ನು ಸರಿಪಡಿಸುವಂತೆ ಕೋರ್ಟ್ ಮೆಟ್ಟಿಲೇರಿದ ಪ್ರಸಂಗ ನಡೆದಿದೆ. ಈ ವೇಳೆ ಕಾರು ಮಾಲೀಕನ ಪರ ತೀರ್ಪು ಪ್ರಕಟಿಸಿರುವ ಗ್ರಾಹಕ ನ್ಯಾಯಾಲಯವು ಮೋಸ ಮಾಡಿದ ಮಾರುತಿ ಸುಜುಕಿ ವಿರುದ್ಧ ದಂಡ ವಿಧಿಸಿದೆ.

ಗುಜರಾತಿನ ಪೋರಬಂದರ್ ನಿವಾಸಿ ನಳನಿಬಾಯಿ ಎನ್ನುವವರು 2011ರಲ್ಲಿ ರಾಜ್‌ಕೋಟ್‌ದಲ್ಲಿರುವ ಮಾರುತಿ ಸುಜುಕಿ ಡೀಲರ್ಸ್ ಬಳಿ ಹಳೆಯ ತಲೆಮಾರಿನ ಸ್ವಿಫ್ಚ್ ಹ್ಯಾಚ್‌ಬ್ಯಾಕ್ ಕಾರನ್ನು ಖರೀದಿ ಮಾಡಿದ್ದರು. ಆದ್ರೆ ಕಾರು ಖರೀದಿ ಮಾಡಿದ ಒಂದೇ ವರ್ಷದಲ್ಲಿ ಕಾರು ಗುಜುರಿಗೆ ಸೇರುವ ಮಟ್ಟಕ್ಕೆ ಬಂದಿತ್ತು.

ಕಾರು ಖರೀದಿ ನಂತರ ಕೇವಲ 17 ಸಾವಿರ ಕಿ.ಮೀ ಓಡಿದ್ದ ಆ ಕಾರು ಒಂದು ದಿನ ಕಾರು ಚಾಲನೆಯಲ್ಲಿರುವಾಗಲೇ ಕುಸಿದು ಬಿದ್ದಿತ್ತು. ಕಾರು ಖರೀದಿ ಮಾಡಿ ಒಂದು ವರ್ಷ ಕೂಡಾ ಆಗಿಲ್ಲಾ ಹೀಗಾದ್ರೆ ಹೇಗೆ ಅಂತಾ ಡೀಲರ್ಸ್ ಬಳಿ ದೂರು ಹೇಳಿದ್ದರು.

ಇದಕ್ಕೆ ನಾನಾ ಕಾರಣ ನೀಡಿದ ಮಾರುತಿ ಸುಜುಕಿ ಡೀಲರ್ಸ್ ಅಧಿಕಾರಿಗಳು ಸರಿಯಾಗಿ ಡ್ರೈವ್ ಮಾಡದ ಹಿನ್ನೆಲೆ ಹೀಗಾಗಿದೆ ಹೊರತು ಇದರಲ್ಲಿ ನಮ್ಮದು ತಪ್ಪಿಲ್ಲಾ ಅಂತಾ ಕೈತೊಳೆದುಕೊಂಡಿದ್ದಾರೆ. ಜೊತೆಗೆ ಕೊಟ್ಟಿರುವ ವಾರಂಟಿ ಅವಧಿಗೂ ಮುನ್ನ ಹೀಗಾದ್ದರೂ ರಿಫೇರಿಗಾಗಿ ಹೆಚ್ಚುವರಿ ಮೊತ್ತ ಕೇಳಿದ್ದಾರೆ.

ಇದಕ್ಕೆ ವಿರೋಧಿಸಿದ ನಳನಿಬಾಯಿಯವರು ಅಹಮದಾಬಾದ್ ಗ್ರಾಹಕ ನ್ಯಾಯಲಯದಲ್ಲಿ ಈ ಕುರಿತಂತೆ ಪ್ರಕರಣ ದಾಖಲಿಸಿದ್ದಲ್ಲದೇ ತನದಾಗ ಅನ್ಯಾಯಕ್ಕೆ ಹೊಸ ಕಾರಿನೊಂದಿಗೆ ಹೆಚ್ಚುವರಿಯಾಗಿ ಪರಿಹಾರ ನೀಡುವಂತೆ ಬೇಡಿಕೆ ಸಲ್ಲಿಸಿದ್ದರು.

ಈ ಕುರಿತಂತೆ ನಡೆದ 6 ವರ್ಷಗಳ ಅವಧಿಯಲ್ಲಿನ ಹಲವು ವಿಚಾರಣೆಗಳಲ್ಲಿ ಪರ-ವಿರೋಧ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದ ಕೋರ್ಟ್ ಕಳೆದ ವಾರ ಅಂತಿಮ ತೀರ್ಪು ನೀಡಿದ್ದು, ಹೊಸ ಕಾರಿನ ಬದಲಾಗಿ ಕಾರಿನಲ್ಲಿ ಪ್ರತಿಯೊಂದು ಕಳಪೆ ಬಿಡಿಭಾಗಗಳನ್ನು ಬದಲಿಸುವುದು ಸೇರಿದಂತೆ ಇದುವರೆಗೂ ಆದ ಖರ್ಚುಗಳಿಗಾಗಿ ರೂ.50 ಸಾವಿರ ಪರಿಹಾರ ನೀಡುವಂತೆ ಮಾರುತಿ ಸುಜುಕಿ ಸಂಸ್ಥೆಗೆ ಸೂಚನೆ ನೀಡಿದೆ. (ಎನ್.ಬಿ)

Leave a Reply

comments

Related Articles

error: