ಮೈಸೂರು

ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಹಸ್ರತ್ ಬೆಂಬಲಿಸುವಂತೆ ಮನವಿ

ಮೈಸೂರು,ಆ.29 : ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎನ್.ಆರ್.ಕ್ಷೇತ್ರದ ವಾರ್ಡ್ ನಂ.29ರಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಹಸ್ರತ್ ಅವರನ್ನು ಬೆಂಬಲಿಸುವಂತೆ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ಇಕ್ಬಾಲ್ ಅಹ್ಮದ್ ಮನವಿ ಮಾಡಿದರು.

ಕಳೆದ ಬಾರಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದ ಹಸ್ರತ್ ಉಲ್ಲಾ ಅವರು ಕುಡಿಯುವ ನೀರು, ರಸ್ತೆಗಳ ಡಾಂಬರೀಕರಣ, ಪಡಿತರ ಚೀಟಿ, ವೃದ್ಧಾಪ್ಯ ವೇತನ ಸೇರಿದಂತೆ ಬಡಾವಣೆಯ ಅಭಿವೃದ್ಧಿ ಮಾಡಿದ್ದು ಅವರನ್ನು ಬೆಂಬಲಿಸುವ ಮೂಲಕ ಮತ್ತಷ್ಟು ಅಭಿವೃದ್ಧಿಗೆ ಮತದಾರರು ಸಹಕರಿಸಬೇಕೆಂದು ಸುದ್ದಿಗೋಷ್ಠಿಯಲ್ಲಿ ಕೋರಿದರು.

ಅಲ್ಲದೇ ಅವರ ತಾಯಿಯವರು ಸಹ ಪಾಲಿಕೆ ಸದಸ್ಯರಾಗಿ ಸೇವೆ ಮಾಡಿದ್ದಾರೆ ಎಂದು ತಿಳಿಸಿದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: