ಪ್ರಮುಖ ಸುದ್ದಿ

ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದಿಂದ ಸಿಹಿ ಸುದ್ದಿ : ಹೆಚ್ಚಿತು ವೇತನ

ದೇಶ(ನವದೆಹಲಿ)ಆ.29:- ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಮೋದಿ ಸರ್ಕಾರ ಸಿಹಿ ಸುದ್ದಿ ನೀಡಿದೆ.

ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನೌಕರರ ತುಟ್ಟಿ ಭತ್ತೆಯನ್ನು ಶೇ.2ಕ್ಕೆ ಹೆಚ್ಚಿಸಲು ನಿರ್ಧರಿಸಿದೆ ಎನ್ನಲಾಗಿದೆ. ವೇತನ ಬಳಿಕ ಡಿಎ ಶೇ.9ರಷ್ಟಾಗಿದೆ. ಲಭ್ಯ ಮಾಹಿತಿಗಳನ್ವಯ ಕಳೆದ ಜು.1ರಿಂದಲೇ ಅನ್ವಯವಾಗಲಿದೆ ಎನ್ನಲಾಗುತ್ತಿದೆ. ಇದು ಸುಮಾರು 1.1ಕೋಟಿ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಲಾಭವಾಗಲಿದೆ ಎಂದು ತಿಳಿದು ಬಂದಿದೆ. ಸಭೆಯಲ್ಲಿ 2018ರ ಜುಲೈ 1ರಿಂದ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ತೆಯೊಂದಿಗೆ ಪಿಂಚಣಿದಾರರಿಗೆ ಹೆಚ್ಚುವರಿ ಪರಿಹಾರವನ್ನು ನೀಡಲು ಅನುಮೋದನೆ ದೊರಕಿದೆ ಎಂದು ತಿಳಿದು ಬಂದಿದ್ದು, ಮೂಲ ವೇತನ ಮತ್ತು ಪಿಂಚಣಿಯ ಮೇಲೆ ಸದ್ಯಕ್ಕಿರುವ ಶೇ.7ರ ಮೇಲೆ ಮತ್ತೆರಡು ಶೇಕಡಾ ಹೆಚ್ಚಿದಂತಾಗಿದೆ. (ಎಸ್.ಎಚ್)

Leave a Reply

comments

Related Articles

error: