ಮನರಂಜನೆ

ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ರನ್ನು ತೆರೆಯ ಮೇಲೆ ತರಲಿದ್ದಾರಾ ಕರಣ್ ಜೋಹರ್?

ದೇಶ(ಮುಂಬೈ)ಆ.29:- ಆ.29:- ಬಾಲಿವುಡ್ ಚಿತ್ರ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ತನ್ನ ಪ್ರೊಡಕ್ಷನ್ ಹೌಸ್ ಚಿತ್ರ ‘ಧಡಕ್’ ನಲ್ಲಿ  ಬಾಲಿವುಡ್ ನ ಮೋಹಕತಾರೆ. ದಿ. ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ರನ್ನು ಬಾಲಿವುಡ್ ಗೆ ಪರಿಚಯಿಸಿದ್ದರು. ಇದೀಗ ಕಿಂಗ್ ಖಾನ್ ಶಾರೂಖ್ ಪುತ್ರ ಆರ್ಯನ್ ಖಾನ್ ಮತ್ತು ನಟಿ ಶ್ರೀದೇವಿಯವರ ಎರಡನೇ ಪುತ್ರಿ ಖುಷಿ ಕಪೂರ್ ಅವರ ಬಾಲಿವುಡ್ ಗ್ರ್ಯಾಂಡ್ ಎಂಟ್ರಿಗೆ ಸಿದ್ಧತೆ ನಡೆಸಿದ್ದಾರಂತೆ.

ಇಬ್ಬರನ್ನು ಒಂದೇ ಚಿತ್ರದಲ್ಲಿ ತೆರೆಯ ಮೇಲೆ ತರಲು ಯತ್ನಿಸಿದ್ದಾರೆ ಎನ್ನಲಾಗಿದ್ದು, ಕೇವಲ ಕರಣ ಜೋಹರ್ ಮಾತ್ರ ಆರ್ಯನ್ ಮತ್ತು ಖುಷಿಯ ಚಿತ್ರ ಮಾಡಲು ಸಾಧ್ಯವೆಂದು ಮಾಧ್ಯಮಗಳು ವರದಿ ಮಾಡಿವೆಯಂತೆ. ಜಾಹ್ನವಿ ಚಿತ್ರದ ಡೆಬ್ಯೂದಂತೆಯೇ ಖುಷಿಯ ಚಿತ್ರದ ಡೆಬ್ಯೂ ಜವಾಬ್ದಾರಿಯನ್ನು ಕರಣ ಜೋಹರ್ ಹೊತ್ತಿದ್ದಾರಂತೆ. ಆದರೆ ಯಾವುದೇ ಅಧಿಕೃರ ಹೇಳಿಕೆಗಳು ಇನ್ನೂ ಹೊರಬಿದ್ದಿಲ್ಲ. (ಎಸ್.ಎಚ್)

Leave a Reply

comments

Related Articles

error: