ದೇಶ

ಅಮಾನ್ಯಗೊಂಡ ಶೇ.99.3ರಷ್ಟು ನೋಟುಗಳು ಬ್ಯಾಂಕ್ ಗಳಿಗೆ ವಾಪಸ್: ಆರ್.ಬಿ.ಐ

ನವದೆಹಲಿ (ಅ.29): ಅಮಾನ್ಯಗೊಂಡಿದ್ದ 500 ಹಾಗೂ 1000 ರುಪಾಯಿ ನೋಟುಗಳ ಲೆಕ್ಕಾಚಾರ ಮುಗಿದಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2017-18ರ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ಇದರ ಜತೆಗೆ ಶೇಕಡಾ 99.3ರಷ್ಟು ನೋಟುಗಳು ಅಂದರೆ 15.3 ಲಕ್ಷ ಕೋಟಿ ರುಪಾಯಿ ನಗದು ಹಣ ಬ್ಯಾಂಕ್ ಗಳಿಗೆ ವಾಪಸಾಗಿದೆ ಎಂದು ಕೂಡ ತಿಳಿಸಿದೆ.

ನವೆಂಬರ್ 8,2016ಕ್ಕೆ ಮುನ್ನ 500 ಹಾಗೂ 1000 ರುಪಾಯಿ ಮುಖ ಬೆಲೆಯ ನೋಟುಗಳು 15.41 ಲಕ್ಷ ಕೋಟಿ ರುಪಾಯಿ ಚಲಾವಣೆಯಲ್ಲಿದ್ದವು. ಆ ಪೈಕಿ 15.31 ಲಕ್ಷ ಕೋಟಿ ರುಪಾಯಿ ನೋಟುಗಳು ಬ್ಯಾಂಕ್ ಗಳಿಗೆ ವಾಪಸಾಗಿವೆ. ನೋಟುಗಳ ಪ್ರಕ್ರಿಯೆ ಹಾಗೂ ಪರಿಶೀಲನೆಯಂಥ ಅತಿ ದೊಡ್ಡ ಗುರಿಯೊಂದು ಅಂತಿಮವಾಗಿ ಯಶಸ್ವಿಯಾಗಿ ಪೂರ್ಣವಾಗಿದೆ ಎಂದು ತಿಳಿಸಲಾಗಿದೆ.

ನೋಟುಗಳ ಪರಿಶೀಲನೆ, ಲೆಕ್ಕಾಚಾರ ಹಾಗೂ ಆ ನಂತರದ ಪ್ರಕ್ರಿಯೆಯನ್ನು ವ್ಯವಸ್ಥಿತ ಮತ್ತು ಸರಿಯಾದ ಬಗೆಯಲ್ಲಿ ಪೂರ್ಣಗೊಳಿಸಲಾಗಿದೆ. ನೋಟುಗಳ ಸಾಚಾತನ ಹಾಗೂ ನಿಖರತೆಯನ್ನು ಕರೆನ್ಸಿ ವೆರಿಫಿಕೇಷನ್ ಅಂಡ್ ಪ್ರೊಸೆಸಿಂಗ್ ಸಿಸ್ಟಮ್ (ಸಿವಿಪಿಎಸ್) ಮೂಲಕ ಖಾತ್ರಿ ಮಾಡಿಕೊಂಡು, ಆ ನಂತರ ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದೆ.

ಅಮಾನ್ಯವಾಗುವ ಮುಂಚೆ ಯಾವ ಪ್ರಮಾಣದಲ್ಲಿ ನೋಟುಗಳು ಚಲಾವಣೆಯಲ್ಲಿ ಇದ್ದವೋ ಆ ಮಟ್ಟವನ್ನು ಈಗ ದಾಟಿದೆ. ಕಳೆದ ವರ್ಷಕ್ಕಿಂತ ಸಾಲ ದರದ ಬೆಳವಣಿಗೆ ಏರಿಕೆ ಕಂಡು, ಎರಡಂಕಿ ಮುಟ್ಟಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ ಇದೇ ವೇಳೆ ಆರ್ಥಿಕ ಹಣದುಬ್ಬರ ಹಾಗೂ ವಿತ್ತೀಯ ಕೊರತೆ ವಿಚಾರದ ಬಗ್ಗೆ ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ. (ಎನ್.ಬಿ)

Leave a Reply

comments

Related Articles

error: