ಮನರಂಜನೆ

‘ಬಾಹುಬಲಿ’ ಪ್ರಭಾಸ್‍ರನ್ನು ಈ ಪಾತ್ರದಲ್ಲಿ ನೋಡಲು ಇಷ್ಟಪಡ್ತಾರಂತೆ ಅಂದ್ರು ಆಮಿರ್!

ಬೆಂಗಳೂರು (ಆ.29): ಬಾಹುಬಲಿಯಲ್ಲಿ ಮಿಂಚಿದ್ದ ಪ್ರಭಾಸ್‍ಗೆ ಬಾಲಿವುಡ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಕಣ್ಣು ಬಿದ್ದೆ. ಮಾತ್ರವಲ್ಲ 1000 ಕೋಟಿ ರೂಪಾಯಿ ಬಜೆಟ್ ನಲ್ಲಿ ಮಹಾಭಾರತಕ್ಕೆ ಕೈ ಹಾಕುತ್ತಿರುವ ಆಮಿರ್, ಈ ಚಿತ್ರದಲ್ಲಿ ‘ಬಾಹುಬಲಿ’ ಪ್ರಭಾಸ್ ಗೆ ಬಹುಮುಖ್ಯ ಪಾತ್ರ ನೀಡಲು ಅಮೀರ್ ಮುಂದಾಗಿದ್ದಾರಂತೆ.

ಈಗಾಗಲೇ ಚಿತ್ರದ ಮೇಲೆ ಅಮೀರ್ ಕೆಲಸ ಶುರು ಮಾಡಿದ್ದಾರೆ. ಪ್ರಭಾಸ್ ಗೆ ಆಫರ್ ನೀಡಿಯಾಗಿದೆ. ಮಹಾಭಾರತ್ ಚಿತ್ರಕ್ಕೆ ಮುಕೇಶ್ ಅಂಬಾನಿ ಹಣ ನೀಡ್ತಿದ್ದಾರೆ. ಚಿತ್ರದ ಮೇಲೆ ಅಮೀರ್ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಬಾಹುಬಲಿ ಮೂಲಕ ವಿಶ್ವದ ಜನರ ಗಮನ ಸೆಳೆದ ಪ್ರಭಾಸ್ ನಮ್ಮ ಚಿತ್ರದಲ್ಲಿರಲಿ ಎಂಬುದು ಅಮೀರ್ ಬಯಕೆಯಂತೆ

ಒಂದು ವೇಳೆ ಪ್ರಭಾಸ್ ಅರ್ಜುನನ ಪಾತ್ರಕ್ಕೆ ಸೈ ಎಂದ್ರೆ ಕೃಷ್ಣನ ಪಾತ್ರದಲ್ಲಿ ಅಮೀರ್ ಮಿಂಚಲಿದ್ದಾರೆ. ದ್ರೌಪದಿ ಪಾತ್ರಕ್ಕೆ ದೀಪಿಕಾ ಪಡುಕೋಣೆ ಜೀವ ತುಂಬುವ ಸಾಧ್ಯತೆ ಹೆಚ್ಚಿದೆ. ಚಿತ್ರ ಮೂರು ಭಾಗವಾಗಿ ನಿರ್ಮಾಣವಾಗುವುದ್ರಿಂದ ಸುಮಾರು 10-15 ವರ್ಷ ಬೇಕೆಂದು ಅಂದಾಜಿಸಲಾಗಿದೆ.

ಚಿತ್ರ ಮೂರು ಭಾಗವಾಗಿ ಮೂಡಿ ಬರಲಿದೆ. ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದಿಂದ ಫ್ರೀಯಾಗಿರುವ ಅಮೀರ್, ಮಹಾಭಾರತ್ ಮೇಲೆ ಕೆಲಸ ಶುರು ಮಾಡಿದ್ದಾರೆ. ಯಾರಿಗೆ ಯಾವ ಪಾತ್ರ ಎಂಬ ಚರ್ಚೆ ನಡೆಯುತ್ತಿದೆ. ಅಮೀರ್, ಅರ್ಜುನನ ಪಾತ್ರದಲ್ಲಿ ಪ್ರಭಾಸ್ ನೋಡಲು ಇಷ್ಟಪಡ್ತಾರಂತೆ.(ಎನ್.ಬಿ)

Leave a Reply

comments

Related Articles

error: