ಸುದ್ದಿ ಸಂಕ್ಷಿಪ್ತ

ಪದವಿ- ಕ್ರೀಡಾ ವಿದ್ಯಾರ್ಥಿ ವೇತನ : ಅರ್ಜಿ ಆಹ್ವಾನ

ಮೈಸೂರು,ಆ.29 : ನಗರದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲೆಪ್ಮೆಂಟ್ ಮತ್ತು ಸೆಂಟರ್ ಫಾರ್ ಸ್ಪೋರ್ಟ್ಸ್ ಅಂಡ್ ಮ್ಯಾನೇಜ್ಮೆಂಟ್ ಸ್ಟಡೀಸ್ ಜಂಟಿಯಾಗಿ ಹನ್ನೊಂದು ತಿಂಗಳ ಪೋಸ್ಟ್ ಗ್ರಾಜ್ಯುಯೇಟ್ ಕಾರ್ಯಕ್ರಮದಲ್ಲಿ ಸೇರಿರಲಿಚ್ಚಿಸುವ ಪದವೀಧರರಿಗೆ ಮತ್ತು ಕ್ರೀಡಾಸಕ್ತರಿಗೆ ಪುಮಾ-ಸಿಎಸ್ &ಎಂಎಸ್ ಪ್ರಾಯೋಜಿತ ವಿದ್ಯಾರ್ಥಿ ವೇತನ ನೀಡಲಿದ್ದಾರೆ.

ಬಹುದೊಡ್ಡ ಕ್ರೀಡಾ ಉತ್ಪನ್ನಗಳ ಹಾಗೂ ಅಥ್ಲೆಟಿಕ್ ಮತ್ತು ಪಾದರಕ್ಷೆಗಳ ತಯಾರಕರಾದ ಜರ್ಮನ್ ಮೂಲಕ ಬಹುರಾಷ್ಟ್ರೀಯ ಕಂಪನಿ ಪುಮಾ ಎಸ್.ಡಿಎಂಐಎಂಡಿ ಮತ್ತು ಸಿಎಸ್ ಮತ್ತು ಎಂಎಸ್ ನ ಪಿ.ಜಿ.ಪಿ.ಎಸ್.ಎಂ. ಕೋರ್ಸ್ ಗೆ ಸೇರಲಿಚ್ಚಿಸುವ ಅರ್ಹ 2 ವಿದ್ಯಾರ್ಥಿಗಳಿಗೆ 2.50 ಲಕ್ಷ ರೂಗಳ ವಿದ್ಯಾರ್ಥಿ ವೇತನ ನೀಡಲು ಮುಂದೆ ಬಂದಿದೆ.

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸ ಬಯಸುವವರು ಮೊ.ಸಂ. 9845402532, [email protected]  or https://sdmcsm.in ಅಲ್ಲಿ ನೋಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

 

 

Leave a Reply

comments

Related Articles

error: