ಮೈಸೂರು

ಕಾಂಗ್ರೆಸ್ ಅಭ್ಯರ್ಥಿಗೆ ಏಕವಚನ ಪ್ರಯೋಗಿಸಿದ ಸಬ್ ಇನ್ಸಪೆಕ್ಟರ್ ನ್ನು ತರಾಟೆಗೆ ತೆಗೆದುಕೊಂಡ ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್

ಮೈಸೂರು,ಆ.29:- ಮೈಸೂರು ನಗರ ಪಾಲಿಕೆ ಚುನಾವಣೆ ಅಭ್ಯರ್ಥಿ ಕೃಷ್ಣಕುಮಾರ್ ಸಾಗರ್ ಗೆ  ಸಬ್ ಇನ್ಸಪೆಕ್ಟರ್ ರಘು ಏಕವಚನ ಪ್ರಯೋಗ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ ಮಾಜಿ ಸಚಿವ ಸಿ ಎಚ್ ವಿಜಯಶಂಕರ್  ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ.

ಮೈಸೂರಿನ ರಾಮಕೃಷ್ಣ ನಗರದ ಜಿ ಬ್ಲಾಕ್ ನಲ್ಲಿ ಘಟನೆ ನಡೆದಿದ್ದು, ಕುವೆಂಪುನಗರ ಠಾಣೆಯ ಸಬ್ ಇನ್ಸ ಪೆಕ್ಟರ್ ರಘು ಮೇಲೆ ಮಾಜಿ ಸಚಿವ ಸಿ ಎಚ್ ವಿಜಯಶಂಕರ್ ಫುಲ್ ಗರಂ ಆದ ಘಟನೆ ನಡೆಯಿತು. ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದರೂ ಸಹ ಅಭ್ಯರ್ಥಿ ಕೃಷ್ಣಕುಮಾರ್ ಸಾಗರ್ ಗುಂಪು ಮಾಡಿ ಪ್ರಚಾರ ಮಾಡುತ್ತಿದ್ದರು.  ಈ ವೇಳೆ ಕಾರಿನಲ್ಲೇ ಕುಳಿತು ಅಭ್ಯರ್ಥಿಯನ್ನು ಇನ್ಸಪೆಕ್ಟರ್ ರಘು ಕೈ ಬೀಸಿ ಕರೆದಿದ್ದಾರೆ.

ಇನ್ಸಪೆಕ್ಟರ್ ವರ್ತನೆ ನೋಡಿ ಕೋಪಗೊಂಡ ವಿಜಯ್ ಶಂಕರ್ ನೋಡು ನೋಡುತ್ತಲೇ ರಘು ಅವರನ್ನು ಕಾರಿನಿಂದ ಕೆಳಗಿಳಿಸಿದ ಕ್ಲಾಸ್ ತೆಗೆದುಕೊಂಡಿದ್ದಾರೆ. ಮರ್ಯಾದೆಯಿಂದ ನಡೆದುಕೊಳ್ಳಬೇಕೆಂದು ಇನ್ಸಪೆಕ್ಟರ್  ರಘು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.  ಬಳಿಕ ಚುನಾವಣಾಧಿಕಾರಿಗಳು ಸ್ಥಳಕ್ಕೆ ಬಂದು ಸಮಾಧಾನಪಡಿಸಲು ಯತ್ನಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: