ಕ್ರೀಡೆ

ಏಷ್ಯನ್ ಗೇಮ್ಸ್ : ಹೆಪ್ಟಾಥ್ಲಾನ್ ವಿಭಾಗದಲ್ಲಿ ಸ್ವಪ್ನ ಬರ್ಮನ್ ಗೆ ಚಿನ್ನ

ವಿದೇಶ(ಜಕಾರ್ತ)ಆ.29:- ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಹದಿನೆಂಟನೆಯ ಏಷ್ಯನ್ ಗೇಮ್ಸ್ ನಲ್ಲಿ ಹನ್ನೊಂದನೇ ದಿನ ಭಾರತ ಹನ್ನೊಂದನೇ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ.

ಇದು ಹೆಪ್ಟಾಥ್ಲಾನ್ ವಿಭಾಗದಲ್ಲಿ ಸ್ವಪ್ನ ಬರ್ಮನ್ ಅವರಿಂದ ಸಾಧ್ಯವಾಗಿದ್ದು, ಐತಿಹಾಸಿಕ ಸಾಧನೆ ಮಾಡಿದ್ದಾರೆ. ಭಾರತಕ್ಕೆ ಏಷ್ಯನ್ ಗೇಮ್ಸ್ ನಲ್ಲಿ ಹೆಪ್ಟಾಥ್ಲಾನ್ ವಿಭಾಗದಲ್ಲಿ ಸಿಕ್ಕಿರುವ ಮೊದಲ ಚಿನ್ನದ ಪದಕವಾಗಿದೆ. 21ರ ಹರೆಯದ ಸ್ವಪ್ನ ಬರ್ಮನ್ ಕೊನೆಯ ಹಂತದಲ್ಲಿ ಒಟ್ಟು 6026 ಪಾಯಿಂಟ್ ಗಳಿಸುವ ಮೂಲಕ ಟಾಪ್ ನಲ್ಲಿದ್ದರು. ಚೀನಾದ ಕ್ವಿನ್ಲಿಂಗ್ ವಾಂಗ್ 5954 ಪಾಯಿಂಟ್ ಪಡೆದು ಬೆಳ್ಳಿ, ಜಪಾನ್ ನ ಯುಕಿ ಯಾಮಾಸಾಕೀ 5873 ಪಾಯಿಂಟ್ ಪಡೆದು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. ಭಾರತದ ಪೂರ್ಣೀಮಾ ಹೆಂಬರಾಮ್ ನಾಲ್ಕನೇ ಸ್ಥಾನದಲ್ಲಿದ್ದರು.  (ಎಸ್.ಎಚ್)

Leave a Reply

comments

Related Articles

error: