ಕ್ರೀಡೆ

ಏಷ್ಯನ್ ಗೇಮ್ಸ್ : ಟ್ರಿಪಲ್ ಜಂಪ್ ನಲ್ಲಿ ಅರ್ಪಿಂದರ್ ಸಿಂಗ್ ಗೆ ಚಿನ್ನ

ವಿದೇಶ(ಜಕಾರ್ತ)ಆ.31:- ಇಂಡೋನೇಷಿಯಾದ ಜಕಾರ್ತದಲ್ಲಿ ನಡೆಯುತ್ತಿರುವ ಹದಿನೆಂಟನೆಯ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಅರ್ಪಿಂದರ್ ಸಿಂಗ್ ಪುರುಷರ ಟ್ರಿಪಲ್ ಜಂಪ್ ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಚಿನ್ನದ ಪದಕವನ್ನು ಗಳಿಸಿದ್ದಾರೆ.

ಫೈನಲ್ ನಲ್ಲಿ 16.77ರಷ್ಟು ದೂರ ಜಂಪ್ ಮಾಡುವ ಮೂಲಕ ಕಳೆದ 48ವರ್ಷಗಳ ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಟ್ರಿಪಲ್ ಜಂಪನ್ ನಲ್ಲಿ ಮೊದಲ ಬಾರಿಗೆ ಚಿನ್ನದ ಪದಕವನ್ನು ಭಾರತಕ್ಕೆ ತಂದುಕೊಟ್ಟಿದ್ದಾರೆ.  ಆರಂಭ ಶುಭದಾಯಕವಾಗಿರಲಿಲ್ಲವಾದರೂ ಅಂತಿಮವಾಗಿ ಯಶಸ್ಸುಗಳಿಸಿದ್ದಾರೆ. ಅರ್ಪಿಂದರ್ ಸಿಂಗ್ ಪದಕದ ಜೊತೆ ಭಾರತ 54ಪದಕಗಳನ್ನು ಪಡೆದುಕೊಂಡಂತಾಗಿದೆ. ಅವರ ಸಹ ಆಟಗಾರರಾಗಿದ್ದ ರಾಕೇಶ್ ಬಾಬು ಎ.ವಿ.ಕೂಡ ಆರನೇ ಸ್ಥಾನ ಗಳಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: