ಮೈಸೂರು

ಮಾರ್ಚ್ 30ರಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ

ಎಸ್‍.ಎಸ್‍.ಎಲ್‍.ಸಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟವಾಗಿದ್ದು, ಮಾರ್ಚ್ 30 ರಿಂದ ಏಪ್ರಿಲ್ 12 ರ ವರೆಗೂ ಪರೀಕ್ಷೆ ನಡೆಯಲಿದೆ. ಮಾರ್ಚ್ 30 ರಂದು ಪ್ರಥಮ ಭಾಷೆ, ಏಪ್ರಿಲ್ 3 ರಂದು ಗಣಿತ, ಏಪ್ರಿಲ್ 5 ರಂದು ದ್ವಿತೀಯ ಭಾಷೆ ಪರೀಕ್ಷೆ ನಡೆಯಲಿದೆ. ಏಪ್ರಿಲ್ 7 ರಂದು ವಿಜ್ಞಾನ, ಏಪ್ರಿಲ್ 10 ರಂದು ತೃತೀಯ ಭಾಷೆ, ಏಪ್ರಿಲ್ 12 ರಂದು ಸಮಾಜ ಪರೀಕ್ಷೆ ನಡೆಯಲಿದೆ.

ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಓದಲು 15 ನಿಮಿಷ ಆರಂಭದಲ್ಲಿ ಕಾಲಾವಕಾಶ ಸಿಗಲಿದೆ ಎಂದು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.

ಮೇ 7 ರಂದು ಕಾಮೆಡ್ ಪರೀಕ್ಷೆ ನಡೆಯಲಿದ್ದು, ಎಂಜಿನಿಯರಿಂಗ್ ಸೀಟಿಗೆ ಮಾತ್ರ ಈ ಬಾರಿ ಪರೀಕ್ಷೆ ನಡೆಯಲಿದೆ. ನೀಟ್ ಪರೀಕ್ಷೆ ಹಿನ್ನಲೆಯಲ್ಲಿ ವೈದ್ಯಕೀಯ ಸೀಟುಗಳಿಗೆ ಕಾಮೆಡ್-ಕೆ ಪರೀಕ್ಷೆಯಿಲ್ಲ.

Leave a Reply

comments

Related Articles

error: