ಮೈಸೂರು

ಆರ್.ಟಿ.ಐ ಕಾರ್ಯಕರ್ತನ ಬಂಧನ

ತಹಶೀಲ್ದಾರರೋರ್ವರು ಆರ್.ಟಿ.ಐ ಕಾರ್ಯಕರ್ತನ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಆತನನ್ನು ಬಂಧಿಸಿದ  ಘಟನೆ ಶುಕ್ರವಾರ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ತಹಶೀಲ್ದಾರ್ ರಮೇಶ್ ಬಾಬು ಎಂಬವರೇ ಆರ್.ಟಿ.ಐ ಕಾರ್ಯಕರ್ತ ನಾಗೇಂದ್ರ ಎಂಬವರ ವಿರುದ್ಧ ದೂರು ದಾಖಲಿಸಿದ್ದರು.

ನಾಗೇಂದ್ರ ತಾನು ಆರ್.ಟಿ.ಐ ಕಾರ್ಯಕರ್ತ ಎಂಬುದಾಗಿ ಹೇಳಿಕೊಂಡು ಪ್ರತಿದಿನ ಕಚೇರಿಗೆ ಬಂದು ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದು, ಮಾನಸಿಕವಾಗಿಯೂ ಕಿರುಕುಳ ನೀಡುತ್ತಿದ್ದಾರೆ ಎಂದು ನಜರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎನ್ನಲಾಗಿತ್ತು.

ನಜರಾಬಾದ್ ಪೊಲೀಸ್ ಠಾಣೆಯ ಇನ್ಸ್`ಪೆಕ್ಟರ್ ಶೇಖರ್ ಅವರು ನಾಗೇಂದ್ರನನ್ನು ಬಂಧಿಸಲು ತಂಡ ರಚಿಸಿದ್ದು, ಕಾರ್ಯಾಚರಣೆಗಿಳಿದ ತಂಡ ನಾಗೇಂದ್ರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ.

Leave a Reply

comments

Related Articles

error: