ಮೈಸೂರು

ಪಾಲಿಕೆ ಚುನಾವಣೆ ಹಿನ್ನೆಲೆ : ಮಹಾರಾಜ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ

ಮೈಸೂರು,ಆ.30:- ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಚುನಾವಣಾ ಆಯೋಗದಿಂದ ಸಕಲ ಸಿದ್ಧತೆ ನಡೆದಿದೆ.

ನಗರದಲ್ಲಿ 4 ಕಡೆ ಮಸ್ಟ್ರಿಂಗ್, ಡಿ-ಮಸ್ಟ್ರಿಂಗ್ ಕೇಂದ್ರಗಳನ್ನು ತೆರೆಯಲಾಗಿದೆ. ಜೆಎಲ್‍ಬಿ ರಸ್ತೆಯ ಮಹಾರಾಜ ಕಾಲೇಜಿನಲ್ಲಿ- 189, ಮಹಾರಾಣಿ ಕಾಲೇಜು- 186, ಪಡುವಾರಹಳ್ಳಿಯ ವಾಲ್ಮೀಕಿ ರಸ್ತೆಯ ಮಹಾರಾಣಿ ಕಾಲೇಜು- 199, ಸಿದ್ಧಾರ್ಥ ಬಡಾವಣೆಯ ಟೆರೇಷಿಯನ್ ಕಾಲೇಜು- 241 ಮತಗಟ್ಟೆಗಳಿವೆ. ಮತಗಟ್ಟೆ ಸಿಬ್ಬಂದಿಗಳ ಸಂಚಾರ ವ್ಯವಸ್ಥೆಗಾಗಿ ಕೆಎಸ್‍ಆರ್‍ಟಿಸಿ ವತಿಯಿಂದ 96 ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ. ನಗರದ 4 ಕೇಂದ್ರಗಳಲ್ಲಿ ಇಂದು ಮಸ್ಟರಿಂಗ್ ಕಾರ್ಯನಡೆಯುತ್ತಿದೆ. ಮಹಾರಾಜ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನಡೆದಿದ್ದು, ಚುನಾವಣಾ ಸಿಬ್ಬಂದಿಗಳು ಈಗಾಗಲೇ ಆಗಮಿಸಿದ್ದಾರೆ. ಮತಗಟ್ಟೆ ಸಿಬ್ಬಂದಿಗಳಿಗೆ ಮತ ಯಂತ್ರಗಳನ್ನು ನೀಡಲಾಗಿದೆ. ಮತಗಟ್ಟೆ ಕೇಂದ್ರಗಳಿಗೆ ತೆರಳಲು 96 ಕೆ ಎಸ್ ಆರ್ ಟಿ ಸಿ ಬಸ್ ಗಳನ್ನು ಬಳಕೆ ಮಾಡಲಾಗಿದೆ.ಈಗಾಗಲೇ ವಿವಿಧ ಭಾಗಗಳಿಂದ ಚುನಾವಣಾ ಅಧಿಕಾರಿಗಳನ್ನು ಕರೆತಂದಿದ್ದು, ಮಸ್ಟರಿಂಗ್ ಸ್ಥಳಗಳಲ್ಲಿ ಸಾರಿಗೆ ಬಸ್ ಗಳು ನಿಂತಿವೆ.ಕೆ ಎಸ್ ಆರ್ ಟಿ ಸಿ ಬಸ್ ಗಳ ಜೊತೆಗೆ ಪ್ರೈವೇಟ್ ಮಿನಿ ಬಸ್ ಗಳನ್ನು ಕೂಡ ಬಳಕೆ ಮಾಡಲಾಗಿದೆ ಎಂದು ಮೈಸೂರು ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣಧಿಕಾರಿ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.

ಮಿನಿಸಮರಕ್ಕೆ ಮತಕೇಂದ್ರಗಳು ಸಜ್ಜಾಗಿದ್ದು, ಪಾಲಿಕೆ ಚುನಾವಣೆಯ 815 ಪೋಲಿಂಗ್ ಸ್ಟೇಷನ್ ನಲ್ಲೂ ಸಿದ್ಧತೆ ನಡೆದಿದೆ. ಚುನಾವಣಾ ಅಧಿಕಾರಿಗಳಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ವ್ಯವ್ಯಸ್ಥೆ ಕಲ್ಪಿಸಲಾಗಿದೆ. ಕುಡಿಯುವ ನೀರು, ಪವರ್ ಸಪ್ಲೈ, ಟೇಬಲ್, ಕೊಠಡಿ  ಸೇರಿದಂತೆ ಸುಸಜ್ಜಿತ ಶೌಚಾಲಯ  ವ್ಯವಸ್ಥೆ ಕಲ್ಪಿಸಲಾಗಿದೆ. ನಾಳೆ ಬೆಳಗ್ಗೆ 7  ಗಂಟೆಗೆ ಮತದಾನ ಆರಂಭವಾಗಲಿದ್ದು,  ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ. ಮಸ್ಟರಿಂಗ್ ಕೇಂದ್ರದಿಂದ ಮತಗಟ್ಟೆ ಕೇಂದ್ರಗಳತ್ತ ಚುನಾವಣಾ ಅಧಿಕಾರಿಗಳು ತೆರಳಲು ಸಿದ್ಧತೆ ನಡೆಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: